ಸೆ.2ರಂದು ಹೆಬ್ಬೂರಿನ ಸ್ತ್ರೀಶಕ್ತಿ ಸಮಾವೇಶಕ್ಕೆ ಸೋನಿಯಾ ಬರ್ತಾರೆ
ಸೆ.2ರಂದು ಹೆಬ್ಬೂರಿನ ಸ್ತ್ರೀಶಕ್ತಿ ಸಮಾವೇಶಕ್ಕೆ ಸೋನಿಯಾ ಬರ್ತಾರೆ
ಸ್ತ್ರೀಶಕ್ತಿ ಯೋಜನೆಗೆ 8.5 ಕೋಟಿ ರುಪಾಯಿ ಆವರ್ತ ನಿಧಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಶುಕ್ರವಾರ (ಆ.29) ಸುದ್ದಿಗಾರರಿಗೆ ಸಮಾವೇಶದ ಸಿದ್ಧತೆಗಳ ಬಗ್ಗೆ ಹೇಳಿದರು. ಸ್ತ್ರೀಶಕ್ತಿ ಗುಂಪುಗಳ ಸುಮಾರು 2 ಲಕ್ಷ ಹೆಂಗಸರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ತುಮಕೂರು, ಬೆಂಗಳೂರು, ಕೋಲಾರ ಮತ್ತು ಮಂಡ್ಯ ಜಿಲ್ಲೆಯ ಸ್ತ್ರೀಶಕ್ತಿ ಗುಂಪುಗಳಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಮಾವೇಶದಲ್ಲಿ ಭಾಗವಹಿಸುವವರಿಗೆ ಊಟ ಕೊಡಲು 150 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಸ್ತ್ರೀಶಕ್ತಿ ಯೋಜನೆಗೆ 3 ವರ್ಷ ತುಂಬಿದ ಸಂಭ್ರಮವನ್ನು ಆಚರಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಯೋಜನೆಗೆ 8.5 ಕೋಟಿ ರುಪಾಯಿ ಆವರ್ತ ನಿಧಿಯನ್ನು ಸರ್ಕಾರ ಮಂಜೂರು ಮಾಡಲಿದೆ ಎಂದು ಮೋಟಮ್ಮ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications