ಬೆಂಗಳೂರಲ್ಲಿ ಮಳೆಯ ಜೊತೆಗೆ ತೀವ್ರವಾದ ಡೆಂಗ್ಯೂಮಾರಿ
ಬೆಂಗಳೂರಲ್ಲಿ ಮಳೆಯ ಜೊತೆಗೆ ತೀವ್ರವಾದ ಡೆಂಗ್ಯೂಮಾರಿ
ನಿಮ್ಮ ಮನೆಗಳ ತಾರಸಿ, ಆವರಣ ಸ್ವಚ್ಛವಾಗಿಟ್ಟುಕೊಳ್ಳಿ
ತಾರಸಿ ಮೇಲೆ ನಿಲ್ಲುವ ನೀರು ಹಾಗೂ ತೆಂಗಿನ ಕರಟ, ಪ್ಲಾಸ್ಟಿಕ್ ಡಬ್ಬ, ಟೈಯರ್ ಮತ್ತಿತರ ವಸ್ತುಗಳಲ್ಲಿ ಶೇಖರಣೆಯಾಗುವ ತಿಳಿನೀರಿನಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಈ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದರಿಂದ, ಅವು ಕಚ್ಚುವ ವ್ಯಕ್ತಿಗೆ ಡೆಂಗೆ ಜ್ವರ ಬರುತ್ತದೆ ಎಂದು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಸುಶೀಲ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ನಗರದಲ್ಲಿ 55 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜನ ತಮ್ಮ ಮನೆಯ ತಾರಸಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಎಲ್ಲೂ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಡುತ್ತದೆ ಎಂದು ಚಂದ್ರಶೇಖರ್ ಹೇಳಿದರು.
ಇದನ್ನೂ ಓದಿ-
ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !
ಮುಖಪುಟ / ವಾರ್ತೆಗಳು












Click it and Unblock the Notifications