ರೈತರಿಗೆ ಗಾಯದ ಮೇಲೆ ಬರೆ: ದಿನಕ್ಕೆ 10 ಗಂಟೆ ವಿದ್ಯುತ್‌ ಕಡಿತ

ರೈತರಿಗೆ ಗಾಯದ ಮೇಲೆ ಬರೆ: ದಿನಕ್ಕೆ 10 ಗಂಟೆ ವಿದ್ಯುತ್‌ ಕಡಿತ
ಸೋತ ಮುಂಗಾರು , ಖಾಲಿ ಜಲಾಶಯಗಳು

ಬೆಂಗಳೂರು : ಎಲ್ಲಾ ಲೆಕ್ಕಾಚಾರ ಹಾಗೂ ಮೋಡಬಿತ್ತನೆಯ ಹೊರತಾಗಿಯೂ ಈ ಬಾರಿ ಮುಂಗಾರು ವಿಫಲವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ 10 ಗಂಟೆಗಳ ಕಾಲ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ 14 ಗಂಟೆ ಕಾಲ ವಿದ್ಯುತ್‌ ಪೂರೈಕೆ ಇದೆ. ಆದರೆ ಆ ಪೈಕಿ ಕೇವಲ ನಾಲ್ಕು ಗಂಟೆ ತ್ರೀ ಫೇಸ್‌ ಹಾಗೂ ಹತ್ತು ಗಂಟೆ ಸಿಂಗಲ್‌ ಫೇಸ್‌ ವಿದ್ಯುತ್‌ ಒದಗಿಸಲಾಗುತ್ತಿದೆ. ಈಗ ಮತ್ತೆ ಲೋಡ್‌ ಶೆಡ್ಡಿಂಗ್‌ ಹೇರಿರುವುದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಬಾರಿ ಮುಂಗಾರು ವಿಫಲವಾಗಿರುವುದರಿಂದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ ಮಾತ್ರಕಳೆದ ವರ್ಷಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ. ಆದರೆ ಫೆಬ್ರವರಿಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಲಿರುವುದನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್‌ ಪೂರೈಕೆಯಲ್ಲಿ ನಿಯಂತ್ರಣ ಮಾಡಲಾಗುತ್ತಿದೆ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+