ಹುಬ್ಬಳ್ಳಿಯಲ್ಲಿ ಜೈನ್ ಪ್ರತಿಕೃತಿ ದಹನ, ಉದ್ರಿಕ್ತರಿಂದ ಕಲ್ಲುತೂರಾಟ
ಹುಬ್ಬಳ್ಳಿಯಲ್ಲಿ ಜೈನ್ ಪ್ರತಿಕೃತಿ ದಹನ, ಉದ್ರಿಕ್ತರಿಂದ ಕಲ್ಲುತೂರಾಟ
ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ, ಪೊಲೀಸರ ಮಧ್ಯಪ್ರವೇಶ
ಹೈಕೋರ್ಟ್ ಪೀಠಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಚಳವಳಿಕಾರರು ಶುಕ್ರವಾರ ತಾಳ್ಮೆ ಕಳೆದುಕೊಂಡು ಕಲ್ಲು ತೂರಾಟ ನಡೆಸಿದರು. ಈ ಕಲ್ಲು ತೂರಾಟದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರಸಭೆ ಸದಸ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು - ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ಕೆ.ಜೈನ್ ಅವರ ಪ್ರತಿಕೃತಿಯನ್ನು ದಹಿಸಿದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಯನ್ನೂ ನಡೆಸಿದರು. ಉದ್ರಿಕ್ತ ಪ್ರತಿಭಟನಾಕರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications