ಉ.ಕ.ದಲ್ಲಿ ಹೈಕೋರ್ಟ್ ಪೀಠ : ಚಳವಳಿಗೆ ಬಿ.ಸಿ.ಪಾಟೀಲ್ ಎಂಟ್ರಿ
ಉ.ಕ.ದಲ್ಲಿ ಹೈಕೋರ್ಟ್ ಪೀಠ : ಚಳವಳಿಗೆ ಬಿ.ಸಿ.ಪಾಟೀಲ್ ಎಂಟ್ರಿ
ಕಲಾವಿದರ ದಂಡು ಸೇರಿಸಿ ಹೋರಾಟಕ್ಕೆ ಬೀದಿಗಿಳಿಯಲು ಪಾಟೀಲರು ಸಿದ್ಧ
ಪೀಠ ಸ್ಥಾಪನೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅನುಮತಿ ಕೊಡದಿದ್ದರೆ ಉತ್ತರ ಕರ್ನಾಟಕದ ಕಲಾವಿದರನ್ನೆಲ್ಲ ಒಗ್ಗೂಡಿಸಿ ಉಗ್ರ ಚಳವಳಿ ಮಾಡುತ್ತೇನೆ ಎಂದು ಅಖಿಲ ಭಾರತ ಪ್ರಗತಿಪರ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಸಿ.ಪಾಟೀಲರು ಧಮಕಿ ಹಾಕಿದರು.
ಗುರುವಾರ (ಆ.28) ಪಾಟೀಲರು ಇದನ್ನು ಹೇಳಲೆಂದೇ ಸುದ್ದಿಗೋಷ್ಠಿ ಕರೆದಿದ್ದರು. ಪೀಠ ಸ್ಥಾಪನೆಗೆ ಆಗ್ರಹಿಸಿ ಉತ್ತರ ಕರ್ನಾಟಕದ ಕಲಾವಿದರನ್ನು ಸೇರಿಸಿಕೊಂಡು ಬೀದಿಗಿಳಿದು ಹೋರಾಟ ಮಾಡಲೂ ಸಿದ್ಧ ಎಂದು ಪಾಟೀಲ್ ಅಬ್ಬರಿಸಿದರು.
ಅಂದಹಾಗೆ, ಸದ್ಯಕ್ಕೆ ನಟರಾಗಿ ಅಷ್ಟೇನೂ ಸದ್ದು ಮಾಡದ ಪಾಟೀಲರ ಕೈ ರಾಜಕಾರಣದಲ್ಲಿ ಇನ್ನೂ ಪಳಗಿಲ್ಲ. ಇನ್ನೂ ಡಬ್ಬದಲ್ಲಿರುವ ಜೋಗುಳ ಚಿತ್ರದ ಪ್ರಚಾರಕ್ಕೆ ಇದು ಪಾಟೀಲರ ಗಿಮಿಕ್ಕು ಅಂತ ಗಾಂಧಿನಗರ ಲೇವಡಿಯಾಡುತ್ತಿರುವುದನ್ನು ನೆನಪಿಸಿದರೆ ಪಾಟೀಲರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications