ಚಿತ್ರದುರ್ಗದ ಕ್ರೀಡಾಂಗಣ ಅವ್ಯವಸ್ಥೆ ಕಂಡು ಮರುಗಿದ ಶಾಸಕ
ಚಿತ್ರದುರ್ಗದ ಕ್ರೀಡಾಂಗಣ ಅವ್ಯವಸ್ಥೆ ಕಂಡು ಮರುಗಿದ ಶಾಸಕ
ಕ್ರೀಡಾಂಗಣವೆಂಬುದು ಅವ್ಯವಸ್ಥೆಗಳ ಆಗರವಯ್ಯಾ.. !
ಉದಾಹರಣೆಗೆ ಚಿತ್ರದುರ್ಗ. ಇತ್ತೀಚೆಗೆ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿದ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಚಿತ್ರದುರ್ಗದ ಕ್ರೀಡಾಂಗಣ ನಿರ್ವಹಣೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಮಾತನಾಡಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದ ನಿರ್ವಹಣೆ ತೀರಾ ಕಳಪೆಯಾಗಿದೆ. ಲೈಟುಗಳು ಸರಿಯಾಗಿಲ್ಲದ, ಹುಲ್ಲು ಬೆಳೆದಿರುವ ಕ್ರೀಡಾಂಗಣವನ್ನು ನೋಡಿಕೊಳ್ಳುವವರಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರೀಡಾಂಗಣಕ್ಕೆಂದೇ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಾರೆ. ಆದರೆ ಅವುಗಳಿಗೋಸ್ಕರ ಬಿಡುಗಡೆಯಾದ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗದೇ ಇರುವುದರ ಬಗ್ಗೆ ಅವರು ಬೇಜಾರು ಮಾಡಿಕೊಂಡರು.
ಮುಂದಿನ ಒಲಂಪಿಕ್ಸ್ ನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಕ್ರೀಡೆಗೆ ನೀಡುವ ಪ್ರೋತ್ಸಾಹವನ್ನು ಇಮ್ಮಡಿಗೊಳಿಸಿದೆ. ಆದರೆ ಕ್ರೀಡಾ ಕ್ಷೇತ್ರವನ್ನು ನಿರ್ವಹಿಸುವವರು ಪ್ರಾಮಾಣಿಕವಾಗಿ ಹಾಗೂ ಸಮರ್ಪಕವಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಪ್ಪಾ ರೆಡ್ಡಿ ಹೇಳಿದರು.
ಶಾಸಕರ ಅಸಮಾಧಾನದ ಮಾತುಗಳು ಮುಗಿಯುತ್ತಿದ್ದಂತೆಯೇ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಆಧಿಕಾರಿ ಕೆ. ಬಾಲಾಜಿ ಜಿಲ್ಲಾ ಸ್ಟೇಡಿಯಂನಲ್ಲಿರುವ ಕಚೇರಿಗೆ ತೀರಾ ತಡವಾಗಿ ಆಗಮಿಸಿದರು. ಬಾಲಾಜಿಯವರೊಡನೆ ಮತ್ತೊಮ್ಮೆ ಕ್ರೀಡಾಂಗಣ ನಿರ್ವಹಣೆಯನ್ನು ದೂರಿದ ಶಾಸಕರು ತಮ್ಮ ಮಾತು ಮುಗಿಸಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಕಾಂಕ್ರೀಟ್ ಕಾಡಿನ ಕ್ರೀಡಾಂಗಣಗಳ ಕಥೆ
ಮುಖಪುಟ / ವಾರ್ತೆಗಳು












Click it and Unblock the Notifications