ಉತ್ತರ ಕರ್ನಾಟಕದಲ್ಲಿ ಬಿತ್ತನೆ ಮೋಡಗಳಿಲ್ಲ , ಮಳೆಯಿಲ್ಲ
ಉತ್ತರ ಕರ್ನಾಟಕದಲ್ಲಿ ಬಿತ್ತನೆ ಮೋಡಗಳಿಲ್ಲ , ಮಳೆಯಿಲ್ಲ
ಸುಳ್ಳಾದ ರೇಡಾರ್ ವರದಿ, ವಾಪಸ್ಸಾದ ವಿಮಾನಗಳು
ಆದರೆ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಯಶಸ್ವಿಯಾಗಿದೆ. ರೇಡಾರ್ ವರದಿಯನ್ನಾಧರಿಸಿ ಹಾವೇರಿ, ಶಿರಹಟ್ಟಿ , ಸವಣೂರು ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ಕಾಗಿ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಅಲ್ಲಿ ಫಲವತ್ತಾದ ಮೋಡಗಳಿಲ್ಲದೇ ಇರುವುದರಿಂದ ತೆರಳಿದ ವಿಮಾನಗಳು ವಾಪಸ್ಸಾಗಬೇಕಾಯಿತು.
ವಾಪಸ್ಸು ಬರುವ ದಾರಿಯಲ್ಲಿ- ನೆಲಮಂಗಲ, ಗುಬ್ಬಿ, ತುಮಕೂರು ಪ್ರದೇಶಗಳಲ್ಲಿ ಫಲವತ್ತಾದ ಮೋಡಗಳನ್ನು ಪತ್ತೆ ಹಚ್ಚಿ ಮೋಡ ಬಿತ್ತನೆ ಮಾಡಲಾಯಿತು. ಆಗಸ್ಟ್ 28ರಂದು ಭದ್ರಾ ಅಚ್ಚುಕಟ್ಟು ಪ್ರದೇಶ, ಮಡಿಕೇರಿ, ಮಂಡ್ಯ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ನಡುವೆ ಮೋಡ ಬಿತ್ತನೆಯ ಹೊರತಾಗಿಯೂ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಬಳ್ಳಾರಿ, ಬೀದರ್, ಗುಲ್ಬರ್ಗ, ಬಿಜಾಪುರ, ಹಾಸನ, ಬಾಗಲ್‌ಕೋಟೆ, ಶಿವಮೊಗ್ಗ, ಧಾರವಾಡ ಹಾಗೂ ಉತ್ತರ ಕನ್ನಡದಲ್ಲಿ ಕಳೆದ ವಾರ ಸಾಕಷ್ಟು ಮಳೆಯಾಗಿದೆ ಎಂದು ಇಲಾಖೆಯ ವರದಿ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications