‘ಮಠಾಧೀಶರೇ ರಾಜಕೀಯ ಬಿಡಿ, ಹಸಿದವರಿಗೆ ಊಟ ನೀಡಿ..’

‘ಮಠಾಧೀಶರೇ ರಾಜಕೀಯ ಬಿಡಿ, ಹಸಿದವರಿಗೆ ಊಟ ನೀಡಿ..’
ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುವಂತೆ ಪೂಜಾರಿ ಆಗ್ರಹ

ಬೆಂಗಳೂರು : ಸ್ವಾಮೀಜಿಗಳು ರಾಜಕೀಯ ಮಾಡುವುದನ್ನು ಬಿಟ್ಟು , ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ನೀಡುವತ್ತ ಗಮನ ಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಸಾಕಷ್ಟು ಮಕ್ಕಳಿಗೆ ಸರಿಯಾದ ಊಟ ದೊರೆಯುತ್ತಿಲ್ಲ . ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ದೊರೆಯುತ್ತಿಲ್ಲ . ಇಂಥ ಸಂದರ್ಭದಲ್ಲಿ ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಲ್ಪಿಸುವ ಕಾರ್ಯದಲ್ಲಿ ಮಠಾಧೀಶರು ತೊಡಗಬೇಕೇ ಹೊರತು ರಾಜಕೀಯದಲ್ಲಲ್ಲ ಎಂದು ಜನಾರ್ಧನ ಪೂಜಾರಿ ಮಾರ್ಮಿಕವಾಗಿ ನುಡಿದರು. ಮಂಗಳವಾರ (ಆ.27) ಕೆ.ಆರ್‌.ಪುರಂನಲ್ಲಿ ನಡೆದ ಬಡ ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪೂಜಾರಿ ಮಾತನಾಡುತ್ತಿದ್ದರು.

ಸುತ್ತೂರು, ಸಿದ್ಧಗಂಗೆ ಮಠಗಳಂಥ ಕೆಲವೇ ಕೆಲವು ಮಠಗಳು ಅನ್ನ ದಾಸೋಹ ಕಾರ್ಯದಲ್ಲಿ ತೊಡಗಿವೆ. ಉಳಿದ ಮಠಗಳೂ ಇಂಥ ಕಾರ್ಯದಲ್ಲಿ ತೊಡಗಬೇಕು ಎಂದು ಪೂಜಾರಿ ಹೇಳಿದರು. ಶಾಲಾ ಮಕ್ಕಳಿಗೆ ಸರ್ಕಾರ ಜಾರಿಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ ಎಂದು ಪೂಜಾರಿ ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+