‘ರೈತರಿಂದ ಲೇವಾದೇವಿದಾರರು ಸಾಲ ವಸೂಲುಮಾಡಕೂಡದು’
‘ರೈತರಿಂದ ಲೇವಾದೇವಿದಾರರು ಸಾಲ ವಸೂಲುಮಾಡಕೂಡದು’
ಸದ್ಯದಲ್ಲೇ ಖಾಸಗಿ ಲೇವಾದೇವಿದಾರರ ಸಾಲ ವಸೂಲಾತಿ ನಿಷೇಧಿಸಿ ಸುಗ್ರೀವಾಜ್ಞೆ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ (ಆ.28) ನಡೆದ ‘ಬ್ಯಾಂಕರುಗಳ ಸಮಾವೇಶ’ದಲ್ಲಿ ಕೃಷ್ಣ ಈ ವಿಷಯ ಹೇಳಿದರು. ಕೃಷ್ಣ ಆಡಿದ ಮಾತುಗಳಲ್ಲಿ ಮುಖ್ಯವಾದವು-
- ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬ್ಯಾಂಕು ಅಥವಾ ಸಹಕಾರಿ ಸಂಸ್ಥೆಗಳ ಸಾಲದ ಒತ್ತಡಕ್ಕಲ್ಲ. ಖಾಸಗಿ ಸಾಲ ತೀರಿಸಲಾರದೆ, ಬಡ್ಡಿಯ ಹೊರೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರೇ ಹೆಚ್ಚು. ಹೀಗಾಗಿ ಖಾಸಗಿ ಲೇವಾದೇವಿದಾರರು ಈ ವರ್ಷ ರೈತರಿಂದ ಸಾಲ ವಸೂಲು ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಲಾಗುವುದು.
- ಎಲ್ಲಾ ವಾಣಿಜ್ಯ ಬ್ಯಾಂಕುಗಳು ರೈತರ ನೆರವಿಗೆ ಧಾವಿಸುವ ಜರೂರತ್ತಿದೆ. ಮನೆ ಕಟ್ಟಲು ಕೇವಲ 8 ಪ್ರತಿಶತ ಬಡ್ಡಿಗೆ ಸಾಲ ನೀಡುವ ಬ್ಯಾಂಕುಗಳು ಕೃಷಿ ಸಾಲಕ್ಕೆ ಶೇ.11ರಷ್ಟು ಬಡ್ಡಿ ವಸೂಲು ಮಾಡುತ್ತಿರುವುದು ದುರದೃಷ್ಟಕರ.
- ಸಾಲದ ಬಾಕಿ ಉಳಿಸಿಕೊಂಡಿರುವ ರೈತರಿಗೂ ಹೊಸದಾಗಿ ಸಾಲ ಕೊಟ್ಟು, ಬ್ಯಾಂಕುಗಳು ಅವರನ್ನು ಕಾಪಾಡಬೇಕು.
- 1970ನೇ ಇಸವಿಗಿಂತ ಈಗ ಇರುವ ಬರ ತೀವ್ರವಾಗಿದೆ.
- ಸರ್ಕಾರಿ ಸಂಸ್ಥೆಗಳು ರೈತರಿಗೆ ಕೊಟ್ಟಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿವೆ. ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸುವ ಕುರಿತು ಮಾತುಕತೆ ನಡೆಯುತ್ತಿದೆ.
ಮುಖಪುಟ / ಕೃಷ್ಣಗಾರುಡಿ












Click it and Unblock the Notifications