ಇನ್ನು ಮುಂದೆ ಆಯಾ ಜಿಲ್ಲೆಗಳಲ್ಲೇ ಪಾಸ್‌ಪೋರ್ಟ್ ಪ್ರಕ್ರಿಯೆ
ಇನ್ನು ಮುಂದೆ ಆಯಾ ಜಿಲ್ಲೆಗಳಲ್ಲೇ ಪಾಸ್‌ಪೋರ್ಟ್ ಪ್ರಕ್ರಿಯೆ
‘ಪಾಕಿಸ್ತಾನದ ಜನರಿಗೆ ಭಾರತದ ಸಿನಿಮಾಗಳು ಬೇಕು’
ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿನೋದ್ ಖನ್ನಾ ಮಂಗಳವಾರ (ಆ.26) ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಈ ವಿಷಯ ತಿಳಿಸಿದರು. ಪಾಸ್‌ಪೋರ್ಟ್ ವಿತರಣೆಯನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶಕ್ಕೆ ಆ.27ರಿಂದಲೇ ಚಾಲನೆ ಸಿಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾಸ್‌ಪೋರ್ಟ್ ಅರ್ಜಿ ವಿತರಿಸುವ ಹಾಗೂ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿನೋದ್ ಖನ್ನಾ ಹೇಳಿದರು.
ದೂತಾವಾಸ ಕಚೇರಿಗಳನ್ನು ಎಲ್ಲಿ ತೆರೆಯಬೇಕು ಎಂಬುದು ಆಯಾ ದೇಶಗಳ ಇಷ್ಟಕ್ಕೆ ಸಂಬಂಧಿಸಿದ್ದು. ಬೆಂಗಳೂರು ದೂತಾವಾಸ ಕಚೇರಿಗಳಿಗೆ ಹೇಳಿಮಾಡಿಸಿದ ಜಾಗ ಎಂಬುದು ನನ್ನ ಅಭಿಪ್ರಾಯ ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಂಸ್ಕೃತಿಕ ವಿನಿಮಯ ನಡೆಯುತ್ತಿದೆ. ಸಂಸದೀಯ ನಿಯೋಗಗಳು ಅಲ್ಲಿಗೆ ಭೇಟಿ ಕೊಟ್ಟಿವೆ. ಎರಡೂ ದೇಶಗಳ ನಡುವೆ ಒಂದಲ್ಲ ಒಂದು ದಿನ ಸ್ನೇಹದ ಕೊಂಡಿ ಕೂಡುತ್ತದೆ. ಪಾಕ್‌ನಲ್ಲಿ ಭಾರತೀಯ ಚಾನೆಲ್‌ಗಳನ್ನು ನಿಷೇಧಿಸಿರುವುದು ಅಲ್ಲಿನ ಜನರಿಗೆ ಇಷ್ಟವಿಲ್ಲ. ಭಾರತೀಯ ಚಿತ್ರಗಳು ಹಾಗೂ ಹಾಡುಗಳನ್ನು ನೋಡುವ ಆಸೆ ಅವರಲ್ಲಿ ಇನ್ನೂ ಇದೆ ಎಂದು ಖುದ್ದು ನಟರೂ ಆಗಿರುವ ಖನ್ನಾ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications