ದೊಡ್ಡಬಳ್ಳಾಪುರ ಯುವತಿ ಪ್ರಾಣ ರಕ್ಷಿಸಿದ ಕೆನಡಾ ಪ್ರವಾಸಿಗರು
ದೊಡ್ಡಬಳ್ಳಾಪುರ ಯುವತಿ ಪ್ರಾಣ ರಕ್ಷಿಸಿದ ಕೆನಡಾ ಪ್ರವಾಸಿಗರು
ಒಡನಾಡಿ ಆಶ್ರಯದಲ್ಲಿ ಆತ್ಮಹತ್ಯೆ ಸುಳಿಯಿಂದ ಹೊರಬಂದ ದೀಪಾಂಜಲಿ
ಕೌಟುಂಬಿಕ ದುರಂತದಿಂದ ಕಂಗಾಲಾದ ದೊಡ್ಡಬಳ್ಳಾಪುರದ ದೀಪಾಂಜಲಿ ಎನ್ನುವ ಬಾಲಕಿ ಕಾವೇರಿ ನದಿಯಲ್ಲಿ ಮುಳುಗಿ ಸಾಯಲು ಹೋಗುತ್ತಿದ್ದಾಗ, ಕೆನಡಾದ ಪ್ರವಾಸಿಗರು ಆಕೆಯನ್ನು ರಕ್ಷಿಸಿದ್ದಾರೆ. ದಕ್ಷಿಣಭಾರತದ ಪ್ರವಾಸ ಕೈಗೊಂಡಿರುವ ಕೆನಡಾದ ವಾಟರ್‌ಲೂ ವಿವಿ ಪದವೀಧರರಾದ ಜಾನೆಟ್ ಹಾಗೂ ಎಲಿಸನ್ ಎನ್ನುವ ಮಹಿಳೆಯರು- ಕುಶಾಲನಗರದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಯತ್ತ ಧಾವಿಸುತ್ತಿದ್ದ ದೀಪಾಂಜಲಿಯನ್ನು ತಡೆದು, ಆಕೆಗೆ ಸಾಂತ್ವನ ಹೇಳಿದ್ದಾರೆ.
ಸಾಲಗಾರರ ಕಾಟದಿಂದ ಮನೆ ಬಿಟ್ಟು ಓಡಿ ಹೋಗಿರುವ ತಂದೆ, ದುರಂತಮಯ ರೀತಿಯಲ್ಲಿ ಅಂತ್ಯಕಂಡ ತಾಯಿಯ ಬದುಕು ಹಾಗೂ ಕುಡುಕ ಸಹೋದರನ ವರ್ತನೆಯಿಂದ ಬೇಸತ್ತು ದೀಪಾಂಜಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ದೀಪಾಂಜಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದಾಳೆ.
ಪ್ರಸ್ತುತ ಮೈಸೂರಿನ ಒಡನಾಡಿ ಸಂಸ್ಥೆ ದೀಪಾಂಜಲಿಗೆ ಆಶ್ರಯ ನೀಡಿದೆ. ವಾಪಸ್ಸು ಊರಿಗೆ ಹೋಗಲು ಇಷ್ಟವಿಲ್ಲದಿರುವ ದೀಪಾಂಜಲಿಯ ಕಲಿಕೆಗೆ ಸವಲತ್ತು ಕಲ್ಪಿಸುವುದಾಗಿ ಒಡನಾಡಿಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ.
ದೀಪಾಂಜಲಿ ಸಹಜ ಸ್ಥಿತಿಗೆ ಮರಳುವವರೆಗೂ ಆಕೆಯಾಂದಿಗೆ ಮೈಸೂರಿನಲ್ಲಿಯೇ ಇರುವುದಾಗಿ ಕೆನಡಾ ಮಹಿಳೆಯರಾದ ಎಲಿಸನ್ ಹಾಗೂ ಜಾನೆಟ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications