ಅ.10 ರಂದು ಶಿವರಾಮ ಕಾರಂತರ ನೆನಪಿಗಾಗಿ ಅಂಚೆ ಚೀಟಿ
ಅ.10 ರಂದು ಶಿವರಾಮ ಕಾರಂತರ ನೆನಪಿಗಾಗಿ ಅಂಚೆ ಚೀಟಿ
ಕಡಲ ತೀರದ ಭಾರ್ಗವನೆ ಸ್ಮರಣಾರ್ಥ ಸಲ್ಲಲಿರುವ ಗೌರವ
ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯವು ಅಂಚೆ ಚೀಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿ ಮಾಜಿ ಸಂಸದ ಐ. ಎಂ. ಜಯರಾಂ ಶೆಟ್ಟಿಗೆ ಪತ್ರ ಬರೆದಿದೆ. ಈ ಅಂಚೆ ಚೀಟಿ ಬಿಡುಗಡೆ ಸಂದರ್ಭದಲ್ಲಿ ಪುಟ್ಟ ಸಮಾರಂಭವೊಂದನ್ನು ಹಮ್ಮಿಕೊಳ್ಳುವ ಇಚ್ಛೆ ಇದೆಯೇ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರನ್ನು ನಿರ್ದೇಶನಾಲಯವು ಕೇಳಿದೆ.
ಕಾರಂತರ ಗೌರವಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡುವಂತೆ ಆಗಿನ ಸಂಸದ ಐ. ಎಂ. ಜಯರಾಂ ಶೆಟ್ಟಿ, ಆಗಿನ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಶಾಸಕ ವಿ. ಎಸ್ ಆಚಾರ್ಯ ಮತ್ತಿತರರು ಮಾಹಿತಿ ಮತ್ತು ಸಂಪರ್ಕ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications