ದಸರಾ ಸ್ಪೆಷಲ್: ಮಹಾರಾಜರ ಜತೆ ಊಟೋಪಚಾರ ಕೂಟ
ದಸರಾ ಸ್ಪೆಷಲ್: ಮಹಾರಾಜರ ಜತೆ ಊಟೋಪಚಾರ ಕೂಟ
ಒಂಬತ್ತು ದಿನಗಳ ಪಂಜಿನ ಮೆರವಣಿಗೆಯಾಂದಿಗೆ ದಸರೆಗೆ ಹೊಸ ಕಳೆ
ಕಳೆದೆರಡು ವರ್ಷಗಳಲ್ಲಿ ದಸರಾಗೆ ಆಗಮಿಸುತ್ತಿರುವ ವಿದೇಶೀ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಈ ಆಕರ್ಷಣೆಯನ್ನು ದ್ವಿಗುಣಗೊಳಿಸಲು ರಾಜಕುಟುಂಬದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ ಜೊತೆ ಊಟ- ಕೂಟವನ್ನು ಏರ್ಪಡಿಸಲಾಗಿದೆ.
ಈ ಕುರಿತು ರಾಜಕುಟುಂಬದವರೊಂದಿಗೆ ಸರಕಾರ ಮಾತುಕತೆ ನಡೆಸುತ್ತಿದೆ. ಆಯ್ದ ವಿದೇಶೀ ಪ್ರವಾಸಿಗರಿಗೂ ಈ ಊಟ- ಕೂಟದಲ್ಲಿ ಭಾಗವಹಿಸಿ ಮಹಾರಾಜರೊಂದಿಗೆ ಮಾತುಕತೆ ನಡೆಸುವ ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ದಸರಾ ಆಚರಣೆ ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿರುವ ಸಹಕಾರ ಸಚಿವ ಎಚ್. ವಿಶ್ವನಾಥ್ ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದೇಶಿಯರಿಗೆ ಮಹಾರಾಜರ ಖಾಸಾ ದರಬಾರ್‌ನ್ನು ವೀಕ್ಷಿಸುವ ಹಾಗೂ ದಸರಾ ಸಂದರ್ಭದಲ್ಲಿ ಅಲಂಕಾರಗೊಳ್ಳುವ ಇಡೀ ಅರಮನೆಯನ್ನು ನೋಡುವ ಅವಕಾಶವನ್ನೂ ಮಾಡಿಕೊಡಲಾಗುವುದು.
ಹಿಂದೆ ಒಂದು ದಿನಕ್ಕೆ ಸೀಮಿತವಾಗಿದ್ದ ಪಂಜಿನ ಮೆರವಣಿಗೆಯನ್ನು ಈ ಬಾರಿ ಒಂಭತ್ತೂ ದಿನಗಳಿಗೆ ವಿಸ್ತರಿಸಲಾಗುವುದು. ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಈ ಬಾರಿ ದಸರೆಗೆ ವೈಭವದ ಕಳೆ ತಂದುಕೊಡಲು ದಸರಾ ಆಚರಣಾ ಸಮಿತಿ ಶ್ರಮಿಸುತ್ತಿದೆ. ಉತ್ಸವದ ಖರ್ಚಿಗಾಗಿ ಪ್ರಥಮ ಬಾರಿಗೆ ಖಾಸಗಿ ವಲಯದಿಂದಲೂ ಪ್ರಾಯೋಜಕರನ್ನು ಆಹ್ವಾನಿಸಲಾಗಿದೆ. ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಾರಿ ದಸರಾ ಉತ್ಸವ ನಡೆಯಲಿದೆ ಎಂದು ವಿಶ್ವನಾಥ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications