ರಾಜ್ಯದೊಳಗೆ ಭಯೋತ್ಪಾದಕರು ನುಸುಳದಂತೆ ಬಿಗಿ ಬಂದೋಬಸ್ತು
ರಾಜ್ಯದೊಳಗೆ ಭಯೋತ್ಪಾದಕರು ನುಸುಳದಂತೆ ಬಿಗಿ ಬಂದೋಬಸ್ತು
ಅಣೆಕಟ್ಟು, ದೇವಳ, ಎತ್ತರದ ಕಟ್ಟಗಳ ಮೇಲೆ ತೀವ್ರ ನಿಗಾ
ಸ್ಫೋಟದ ಸುದ್ದಿ ಹಬ್ಬುತ್ತಿದ್ದಂತೆಯೇ ಸೋಮವಾರ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಗಡಿ ಬಾಗಗಳ ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಕಾವಲು ಹಾಕಲು ಹಾಗೂ ಕರಾವಳಿ ತೀರದ ಉದ್ದಕ್ಕೂ ಹೆಚ್ಚಿನ ಪೊಲೀಸ್ ಪಹರೆ ಹಾಕಿ ಭಯೋತ್ಪಾದಕರು ರಾಜ್ಯದೊಳಕ್ಕೆ ನುಸುಳಲು ಅವಕಾಶವಾಗದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆದ್ದರಿಂದ ರಾಜ್ಯದ ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಟಿ. ಮಡಿಯಾಳ್ ಹೇಳಿದ್ದಾರೆ.
ಪ್ರಮುಖ ಅಣೆಕಟ್ಟು, ಕಟ್ಟಡ ಮತ್ತಿತರ ಕಡೆ ಬಂದೋಬಸ್ತು ಮಾಡಿದ್ದು, ಹೆಚ್ಚು ಜನ ಸಂದಣಿ ಇರುವೆಡೆ ಪೊಲೀಸ್ ಪಹರೆ ನೇಮಿಸಲಾಗಿದೆ. ಅನುಮಾನಾಸ್ಪದವಾಗಿ ಓಡಾಡುವ ಜನರನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ಮಡಿಯಾಳ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications