‘ಮುಸುಕಿನ ಯುದ್ಧ ನಿಲ್ಲುವ ತನಕ ಪಾಕ್‌ಗೆ ಭೇಟಿ ನೀಡುವುದಿಲ್ಲ ’
‘ಮುಸುಕಿನ ಯುದ್ಧ ನಿಲ್ಲುವ ತನಕ ಪಾಕ್‌ಗೆ ಭೇಟಿ ನೀಡುವುದಿಲ್ಲ ’
ಗಡಿ ಪ್ರದೇಶದಲ್ಲಿನ ಪಾಕ್ ಕಿತಾಪತಿ ಕುರಿತು ಜಾರ್ಜ್ ಫರ್ನಾಂಡಿಸ್ ಆಕ್ರೋಶ
ಗಡಿ ಪ್ರದೇಶದಲ್ಲಿ ಪ್ರಾಕ್ಸಿ ಯುದ್ಧ ನಡೆಯುತ್ತಿದೆ. ನಾವೀಗ ಗೊಂದಲದ ಪರಿಸ್ಥಿತಿಯಲ್ಲಿದ್ದೇವೆ. ಗಡಿ ಪ್ರದೇಶದಲ್ಲಿ ಭಯೋತ್ಪಾದನೆ ಹಾಗೂ ಯುದ್ಧ ನಿಲ್ಲದ ಹೊರತು ರಕ್ಷಣಾ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಆ.26ರ ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್ ಅಭಿಪ್ರಾಯಪಟ್ಟರು.
ಗಡಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸದೇ ಇದ್ದಲ್ಲಿ ಅದು ಇತರ ಸಮಸ್ಯೆಗಳಿ ಎಡೆ ಮಾಡಿಕೊಡುತ್ತದೆ. ಅದು ಎರಡು ದೇಶ ಅಥವಾ ಖಂಡಗಳಿಗೆ ಸಂಬಂಧಪಡದೇ ಇಡೀ ಜಗತ್ತಿನ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದ ಜಾರ್ಜ್- ಗಡಿ ಪ್ರದೇಶದಲ್ಲಿ ಒಳ ನುಸುಳುವಿಕೆಯನ್ನು ತಡೆಗಟ್ಟಿದ್ದರೂ , ಅದು ಸಂಪೂರ್ಣವಾಗಿ ನಿಂತಿಲ್ಲ ಎಂದರು.
ಭಾರತ ಹಾಗೂ ಪಾಕಿಸ್ತಾನಗಳೆರಡೂ ಶಾಂತಿಯನ್ನು ಬಯಸುತ್ತವೆ. ಭಾರತ ಹಾಗೂ ಪಾಕ್‌ನ ಜನತೆ ದೀರ್ಘ ಕಾಲದ ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಬೇಕು ಎಂದು ನಿರೀಕ್ಷಿಸುತ್ತದೆ. ಆ ಪರಿಹಾರವನ್ನು ಭಾರತ ಕಂಡು ಹಿಡಿದಿದ್ದರೂ ಪಾಕ್ ಒಪ್ಪಿಕೊಳ್ಳುತ್ತಿಲ್ಲ. ಆದರೂ ಇತ್ತೀಚೆಗೆ ಪಾಕ್ ಅಧ್ಯಕ್ಷ ಪರ್ವೇಜ್ ಮುಷ್ರಫ್, ಭಾರತ- ಪಾಕ್ ನಡುವಿನ ಸಮಸ್ಯೆ ಮಾತುಕತೆಯಿಂದ ಮಾತ್ರ ಪರಿಹಾರವಾಗಬಲ್ಲುದು ಎಂದು ಹೇಳಿರುವುದು ಆಶಾದಾಯಕವಾಗಿದೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications