ಕೃಷಿ ವಿ.ವಿ.ಯಿಂದ ಕನ್ನಡದಲ್ಲಿ ಕೃಷಿವಿಜ್ಞಾನ ಪುಸ್ತಕ ರಚನಾ ಸ್ಪರ್ಧೆ
ಕೃಷಿ ವಿ.ವಿ.ಯಿಂದ ಕನ್ನಡದಲ್ಲಿ ಕೃಷಿವಿಜ್ಞಾನ ಪುಸ್ತಕ ರಚನಾ ಸ್ಪರ್ಧೆ
ಹಸ್ತಪ್ರತಿ ಕಳುಹಿಸಲು ಮಾರ್ಚ್ 31, 2004 ಕೊನೆದಿನ.
2003-04ನೇ ಸಾಲಿನ ಕೃಷಿ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಪ್ರವೇಶವಿದೆ. ಆಸಕ್ತರು ಕೆಳಗಿನ ವಿಷಯಗಳ ಕುರಿತಂತೆ ಪುಸ್ತಕಗಳನ್ನು ರಚಿಸಬಹುದು :
ಸಾವಯವ ಕೃಷಿ, ಸಮಗ್ರ ಪೋಷಕಾಂಶಗಳ ಪೂರೈಕೆ, ಸಮಗ್ರ ಪೀಡೆ ನಿರ್ವಹಣೆ, ಜಲಾನಯನ, ನುಸಿರೋಗ ಹತೋಟಿ, ಜೈವಿಕ ಗೊಬ್ಬರಗಳು, ಮೀನುಗಾರಿಕೆ, ಹೈನುಗಾರಿಕೆ, ಅಲಂಕಾರಿಕ ಸಸ್ಯಗಳು, ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಇತ್ಯಾದಿ ವಿಷಯಗಳು. ಹೆಚ್ಚಿನ ವಿಷಯಗಳಿಗೆ ಕೃಷಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು.
ಹಸ್ತಪ್ರತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2004ನೇ ಇಸವಿಯ ಮಾರ್ಚ್ 31. ಪ್ರಥಮ ಬಹುಮಾನ 4 ಸಾವಿರ ರುಪಾಯಿ ಹಾಗೂ ದ್ವಿತೀಯ ಬಹುಮಾನ 2 ಸಾವಿರ ರುಪಾಯಿ. ಬಹುಮಾನಿತ ಪುಸ್ತಕಗಳನ್ನು ವಿಶ್ವ ವಿದ್ಯಾಲಯ ಪ್ರಕಟಿಸುತ್ತದೆ.
ವಿವರಗಳಿಗೆ ಸಂಪರ್ಕಿಸಿ : ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ, ಬೆಂಗಳೂರು- 560024. ದೂರವಾಣಿ- 080-3411483.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications