ಬಗೆಹರಿದ ಬಿಕ್ಕಟ್ಟು ; 75:25 ಸೀಟು ಹಂಚಿಕೆಗೆ ಕಾಮೆಡ್-ಕೆ ಒಪ್ಪಿಗೆ
ಬಗೆಹರಿದ ಬಿಕ್ಕಟ್ಟು ; 75:25 ಸೀಟು ಹಂಚಿಕೆಗೆ ಕಾಮೆಡ್-ಕೆ ಒಪ್ಪಿಗೆ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಟ್ಟು ಸಡಿಲಿಸಿದ ಖಾಸಗಿ ಕಾಲೇಜುಗಳು
ಆ. 22ರ ಶುಕ್ರವಾರ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆದಿದ್ದ ಸಭೆಯಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು 75: 25 ಸೀಟು ಹಂಚಿಕೆಗೆ ಸಮ್ಮತಿ ಸೂಚಿಸಿದವು. 2003- 04ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಇದು ಅನ್ವಯಿಸುತ್ತದೆ. ಇತ್ತೀಚೆಗೆ ಸುಪ್ರಿಂಕೋರ್ಟ್, ಖಾಸಗಿ ಕಾಲೇಜು ಮತ್ತು ಸರ್ಕಾರದ ನಡುವೆ 50 : 50 ಸೀಟು ಹಂಚಿಕೆ ಇರಬೇಕು ಎಂದು ಆದೇಶ ಕೊಟ್ಟಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ತಲೆದೋರಿತ್ತು.
ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದುದರಿಂದ, ಅನೇಕ ವಿದ್ಯಾರ್ಥಿಗಳು ಸಿಕ್ಕಿದ್ದ ಸೀಟನ್ನೂ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ 25 ಪ್ರತಿಶತ ಸೀಟುಗಳು ಸಾಕೆಂದಿರುವುದರಿಂದ ಸಮಸ್ಯೆ ಬಹುತೇಕ ಬಗೆಹರಿದಂತಾಗಿದೆ.
ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕಾಮೆಡ್- ಕೆ) ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಹೇಳಿದೆ.
ಸಭೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ, ಸುಪ್ರಿಂಕೋರ್ಟ್ ತೀರ್ಪು ಕೊಡುವ ಮುಂಚೆ ಇದ್ದಂತೆಯೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈಗ ಸೀಟು ಹಂಚಿಕೆ ನಡೆಯಲಿದೆ. ಸೋಮವಾರದಿಂದ (ಆ.25) ಮತ್ತೆ ಕೌನ್ಸಿಲಿಂಗ್ ಮುಂದುವರೆಯಲಿದ್ದು, ಬಾಕಿ ಸೀಟುಗಳನ್ನು ಹಂಚಲಾಗುವುದು. ಸಾವಿರಾರು ವಿದ್ಯಾರ್ಥಿಗಳ ಹಿತ ಕಾಪಾಡಲು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಖಾಸಗಿ ಕಾಲೇಜು ಮಂಡಳಿಗಳ ಜೊತೆ ನಡೆಸಿದ ಎರಡು ಸುತ್ತಿನ ಮಾತುಕತೆ ಫಲ ಕೊಟ್ಟಿತು ಎಂದರು.
(ಪಿಟಿಐ)
ವಾರ್ತಾ ಸಂಚಯ
ವೃತ್ತಿಪರ ಸೀಟು ಹಂಚಿಕೆ : ಸುಪ್ರಿಂಕೋರ್ಟ್‌ನಿಂದ ನೀತಿ ಸಂಹಿತೆ
ಮುಖಪುಟ / ವಾರ್ತೆಗಳು












Click it and Unblock the Notifications