ದೇಜಗೌ ಅವರಿಗೆ ಕಾಗಿನೆಲೆ ಪೀಠದ ಪ್ರಥಮ ಕನಕಶ್ರೀ ಪ್ರಶಸ್ತಿ

ದೇಜಗೌ ಅವರಿಗೆ ಕಾಗಿನೆಲೆ ಪೀಠದ ಪ್ರಥಮ ಕನಕಶ್ರೀ ಪ್ರಶಸ್ತಿ
ಆ.24ರ ಭಾನುವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಕಾಗಿನೆಲೆ ಪೀಠದ ಪ್ರಥಮ ಕನಕಶ್ರೀ ಪ್ರಶಸ್ತಿಗೆ ದೇಜಗೌ ಎಂದು ಹೆಸರಾದ ಹಿರಿಯ ಲೇಖಕ ಡಾ.ದೇ.ಜವರೇಗೌಡ ಆಯ್ಕೆಯಾಗಿದ್ದಾರೆ.

ಆ.24ರಂದು ಬೆಂಗಳೂರಿನ ಕನಕಪೀಠದ ಶಾಖಾಮಠ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ದೇಜಗೌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಹಕಾರಿ ಸಚಿವ ಎಚ್‌.ವಿಶ್ವನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗ ಸುಬ್ಬಣ್ಣ , ಕಿಕ್ಕೇರಿ ಕೃಷ್ಣ ಮೂರ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ದಾಸರ ಕೀರ್ತನೆಗಳನ್ನು ಹಾಡುವರು.

ಸಚಿವರಾದ ಎಚ್‌.ಎಂ.ರೇವಣ್ಣ , ಕೆ.ಎನ್‌.ಗಡ್ಡಿ , ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ ಮತ್ತು ಎಂ.ಚಂದ್ರಶೇಖರ್‌ ಕಾರ್ಯಕ್ರಮದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+