ಮೋಡ ಬಿತ್ತನೆ ಮಳೆಯಿಂದ ಹುಬ್ಬಳ್ಳಿ ರೈತನಿಗೆ ಪ್ರಯೋಜನವಿಲ್ಲ
ಮೋಡ ಬಿತ್ತನೆ ಮಳೆಯಿಂದ ಹುಬ್ಬಳ್ಳಿ ರೈತನಿಗೆ ಪ್ರಯೋಜನವಿಲ್ಲ
ಒಣಗಿದ ಬೆಳೆಯನ್ನು ಬದುಕಿಸಲಾರದ ಕೃತಕ ಮಳೆ
ಈ ವರ್ಷ ಒಳ್ಳೆ ಮಳೆಯಾಗುತ್ತದೆ ಎಂಬ ಹವಾಮಾನ ಇಲಾಖೆಯ ಭವಿಷ್ಯಗಳನ್ನು, ರಾಜಕಾರಣಿಗಳ ಭರವಸೆಗಳನ್ನು ಕೇಳಿ ಖಾರಿಫ್ ಬೆಳೆಗೆ ಕೈ ಹಾಕಿದ ಹುಬ್ಬಳ್ಳಿಯ ರೈತನ ಬೆಳೆ ಸುಟ್ಟು ಹೋಗಿವೆ. ಜೂನ್ ಆರಂಭದಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ಖಾರಿಫ್ ಬೆಳೆ ಚಿಗುರಿಕೊಂಡಿತು. ಆದರೆ ಆಗಸ್ಟ್ ಹೊತ್ತಿಗೆ ಸೋಯಾ, ಜೋಳ, ಶೇಂಗಾ, ಭತ್ತ , ಹೆಸರುಕಾಳು ಬೆಳೆಗಳೆಲ್ಲಾ ಒಣಗಿ ಹೋಗಿವೆ.
ಜೂನ್ ತಿಂಗಳಲ್ಲಿ ಧಾರವಾಡಕ್ಕೆ ಚೆಂದಾದ ಮಳೆ ಬಂತು. ಆದರೆ ಜುಲೈಯಲ್ಲಿ ಬೆಳೆ ತಣಿಯುವಷ್ಟು ಮಳೆ ಸುರಿಯುವುದು ನಿಂತು ಹೋಯಿತು. ಧಾರವಾಡ ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆ ಕೇವಲ 44. 3 ಮಿ.ಮೀ. ಮಾತ್ರ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ದಾಖಲಾಗಬೇಕಾದ ಮಳೆಯ ಪ್ರಮಾಣ 183 ಮಿಮೀ.
ಪ್ರತಿ ತಿಂಗಳೂ ಮಳೆ ಸುರಿದಿರುವ ಮಳೆಯ ಲೆಕ್ಕಾಚಾರವಿಟ್ಟು ಕೊಂಡು ಜಿಲ್ಲೆಯ ಕೃಷಿ ಅಧಿಕಾರಿಗಳು ಈ ಬಾರಿ ಶೇ. 100ರಷ್ಟು ಬೆಳೆ ನಾಶವಾಗಿದೆ ಎಂದು ವರದಿ ತಯಾರಿಸಿದ್ದಾರೆ. ಅಲ್ಲಿನ ರೈತರಿಗೆ ಮೋಡ ಬಿತ್ತನೆಯ ಬಗ್ಗೆಯೂ ಭರವಸೆ ಇಲ್ಲ. ವಿಮಾನಗಳು ಅತ್ತಿಂದಿತ್ತ ಹಾರಾಡುವ ಮೂಲಕ ಜಿಲ್ಲೆಯಲ್ಲಿ ತಮ್ಮ ಬೆಳೆಯನ್ನು ಪೊರೆಯುವಂತಹ ಮಳೆಯಾಗಬಹುದು ಎಂಬ ಬಗ್ಗೆ ರೈತರಿಗೆ ನಂಬಿಕೆ ಇಲ್ಲ. ಈಗ ಮಳೆ ಬಂದರೂ, ಬಂದ ಮಳೆ ಒಣಗಿ ಮಲಗಿದ ಬೆಳೆಯನ್ನು ಮತ್ತೆ ಬದುಕಿಸಲಾರದು ಎಂಬುದು ರೈತರ ಅಳಲು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications