ಆ. 24ರಂದು ಬೆಂಗಳೂರಲ್ಲಿ ನಿಟ್ಟೂರರ ಜನ್ಮಶತಾಬ್ದಿ ಸಮಾರಂಭ
ಬೆಂಗಳೂರು : ಅಭಿಮಾನಿಗಳೆಲ್ಲ ಸೇರಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಶತಾಯುಷಿ ನಿಟ್ಟೂರು ಶ್ರೀನಿವಾಸ ರಾಯರ ಜನ್ಮ ಶತಾಬ್ದಿ ಸಮಾರಂಭ ಆಯೋಜಿಸಿದ್ದಾರೆ.
ಆಗಸ್ಟ್ 24ನೇ ತಾರೀಕು ಭಾನುವಾರ ಬೆಳಗ್ಗೆ 10.30ಕ್ಕೆ ಗಾಯನ ಸಮಾಜದಲ್ಲಿ ಸಮಾರಂಭ ನಡೆಯಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಡಾ.ರಂಗನಾಥ ಮಿಶ್ರ ಸಮಾರಂಭ ಸಮಾರಂಭ ಉದ್ಘಾಟಿಸಲಿದ್ದಾರೆ.
ಅಪರಾಧ ನ್ಯಾಯಪದ್ಧತಿ ಸುಧಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅಧ್ಯಕ್ಷತೆ ವಹಿಸುವರು. ಅರಣ್ಯ ಸಚಿವ ಕೆ.ಎಚ್.ರಂಗನಾಥ್ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು.












Click it and Unblock the Notifications