ಸಚಿನ್ ಗಿಫ್ಟ್ ಕಾರಿನ ಸುಂಕ ಮನ್ನ ಮಾಡಿದ್ದು ತರವಲ್ಲ- ಕಪಿಲ್
ಸಚಿನ್ ಗಿಫ್ಟ್ ಕಾರಿನ ಸುಂಕ ಮನ್ನ ಮಾಡಿದ್ದು ತರವಲ್ಲ- ಕಪಿಲ್
‘ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಡುವ ಸರ್ಕಾರದ ನೀತಿ ಸರಿಯಲ್ಲ’
ನಗರಕ್ಕೆ ಬಂದಿರುವ ಕಪಿಲ್ ಗುರುವಾರ (ಆ.21) ಸುದ್ದಿಗಾರರ ಜೊತೆ ಮಾತಾಡುತ್ತಿದ್ದರು. ನಾಳೆ ವಿಶ್ವನಾಥನ್ ಆನಂದ್‌ಗೋ, ಧನರಾಜ್ ಪಿಳ್ಳೈಗೋ, ಅಮಿತಾಬ್ ಬಚ್ಚನ್‌ಗೋ ಅಥವಾ ಸೌರವ್ ಗಂಗೂಲಿಗೋ ಯಾರಾದರೂ ಕಾರನ್ನು ಉಡುಗೊರೆ ಕೊಟ್ಟರೆ, ಸರ್ಕಾರ ಆಗಲೂ ಸುಂಕ ಮನ್ನಾ ಮಾಡುತ್ತದಾ ಅನ್ನೋದು ಕಪಿಲ್ ಪ್ರಶ್ನೆ.
ಸಚಿನ್‌ಗೆ ಕಾರು ಉಡುಗೊರೆಯಾಗಿ ಬಂದದ್ದಕ್ಕೆ ನನಗೆ ಬೇಸರವಿಲ್ಲ. ಆದರೆ ಈ ಹಿಂದೆ ಗಾಲ್ಫ್ ಆಟಗಾರ ಅಮನ್‌ದೀಪ್ ಜಾಲ್‌ಗೆ ದಕ್ಷಿಣ ಕೊರಿಯಾ ಆಟದಲ್ಲಿ ಲೆಕ್ಸಸ್ ಕಾರೊಂದು ಬಹುಮಾನದ ರೂಪದಲ್ಲಿ ಸಿಕ್ಕಿತ್ತು. ಸರ್ಕಾರ ಚಿಕ್ಕಾಸೂ ಸುಂಕ ರಿಯಾಯಿತಿ ತೋರಿಸಲಿಲ್ಲ. ಹೀಗಾಗಿ ಆತ ಆ ಕಾರನ್ನೇ ಕಳೆದುಕೊಳ್ಳಬೇಕಾಯಿತು. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಡುವ ಸರ್ಕಾರದ ನೀತಿ ತರವಲ್ಲ. ಯಾವುದೇ ಆಟಗಾರರಾಗಲೀ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ದೇಶಕ್ಕಾಗಿ ಬೆವರು ಹರಿಸುತ್ತಾರೆ. ಎಲ್ಲಾ ಆಟಗಾರರಿಗೂ ಒಂದೇ ರೀತಿಯ ನೀತಿ ಇರಬೇಕು. ಸಚಿನ್ ವಿಷಯದಲ್ಲಿ ಸರ್ಕಾರ ತೋರಿದ ಭಾರೀ ರಿಯಾಯಿತಿಯನ್ನು ನಾನು ವಿರೋಧಿಸುತ್ತೇನೆ ಎಂದು ಕಪಿಲ್ ಖಂಡಾತುಂಡಾಗಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications