ಯಳಂದೂರಿಗೆ ಸೆ.2ರಂದು ಸೋನಿಯಾ,ಬಿಸಿಯೂಟಕ್ಕೆ ಚಾಲನೆ
ಯಳಂದೂರಿಗೆ ಸೆ.2ರಂದು ಸೋನಿಯಾ,ಬಿಸಿಯೂಟಕ್ಕೆ ಚಾಲನೆ
ಕಾಂಗ್ರೆಸ್ ಅಧ್ಯಕ್ಷೆಯಿಂದ ಅಕ್ಷರ ದಾಸೋಹ ಉದ್ಘಾಟನೆ
ಯಳಂದೂರಿನಲ್ಲಿ ಬಿಸಿಯೂಟ ಯೋಜನೆಯ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಅವರು, ಸೋನಿಯಾ ಗಾಂಧಿ ಸೆಪ್ಟೆಂಬರ್ 2ರಂದು ಯಳಂದೂರಿಗೆ ಆಗಮಿಸುವ ಬಗ್ಗೆ ಜೆ. ಎಸ್. ಎಸ್. ಸಂಸ್ಥೆಗೆ ಭರವಸೆ ನೀಡಿದ್ದಾರೆ ಎಂದರು.
ಯಳಂದೂರು ತಾಲ್ಲೂಕನ್ನು ಸುತ್ತೂರಿನ ಶ್ರೀಗಳು ದತ್ತು ತೆಗೆದುಕೊಂಡಿದ್ದು, ಈ ತಾಲ್ಲೂಕಿನಲ್ಲಿ 1ರಿಂದ 7ನೇ ತರಗತಿಯವರೆಗೆ 33 ಗ್ರಾಮಗಳ 66 ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಊಟವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜೆ.ಎಸ್.ಎಸ್ ವಿದ್ಯಾಪೀಠದ ಆಡಳಿತಾಧಿಕಾರಿ ನಾಗಣ್ಣಾಚಾರ್ ಹೇಳಿದರು.
ಬಿಸಿಯೂಟದ ಯಶಸ್ಸಿನ ಕುರಿತು ಮಾತನಾಡಿದ ಸಚಿವ ಮಹದೇವ ಅವರು ಈ ಯೋಜನೆಗಾಗಿ ಖಾಸಗಿ ಸಂಘ ಸಂಸ್ಥೆಗಳೂ ನೆರವಾಗಬೇಕು ಎಂದು ಮನವಿ ಮಾಡಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications