ಹಿತಾಸಕ್ತಿ ಹಾಗೂ ಸಂಘಟನೆಗೆ ರಂಗಭೂಮಿ ಕಲಾವಿದರ ಸಮ್ಮೇಳನ
ಹಿತಾಸಕ್ತಿ ಹಾಗೂ ಸಂಘಟನೆಗೆ ರಂಗಭೂಮಿ ಕಲಾವಿದರ ಸಮ್ಮೇಳನ
ಹಿರಿಯ ರಂಗಕರ್ಮಿಗಳಿಗೆ ನಮನ, ಕಲಾವಿದರಿಗೆ ಮಾಶಾಸನ ನೀಡಲು ಒತ್ತಾಯ
ಆಗಸ್ಟ್ 26ರಂದು ಬೆಂಗಳೂರಿನ ರವೀದ್ರ ಕಲಾಕ್ಷೇತ್ರದಲ್ಲಿ ರಂಗಭೂಮಿ ಕಲಾವಿದರ ಸಮಾವೇಶ ನಡೆಯುವುದು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಮಾವೇಶವನ್ನು ಉದ್ಘಾಟಿಸುವರು ಎಂದು ವೇದಿಕೆಯ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಂಗ ಕಲಾವಿದರ ಸಮಾವೇಶದಲ್ಲಿ ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಬಿ.ಆರ್.ಸರೋಜಾದೇವಿ ಅವರಿಂದ ಹಿರಿಯ ರಂಗ ಕಲಾವಿದರಿಗೆ ಗೌರವ ಸಮರ್ಪಣೆ ನಡೆಯಲಿದೆ. ಏಣಗಿ ಬಾಳಪ್ಪ, ಜಿ.ವಿ.ಅಯ್ಯರ್, ಆರ್.ನಾಗರತ್ನಮ್ಮ , ಎಚ್.ಟಿ.ಅರಸ್, ಸುಭದ್ರಮ್ಮ ಮನ್ಸೂರ್ ಮುಂತಾದವರನ್ನು ಸನ್ಮಾನಿಸಲಾಗುವುದು. ಶ್ರೀ ಶಿವರುದ್ರ ಮಹಾಸ್ವಾಮಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ಪ್ರಭಾಕರ ರೆಡ್ಡಿ ತಿಳಿಸಿದರು.
ಸಮಾವೇಶದ ಪ್ರಮುಖ ಉದ್ದೇಶಗಳು :
- ವೃತ್ತಿ ನಾಟಕ ಕಂಪನಿಗಳನ್ನು ಉಳಿಸಲು ಸರ್ಕಾರ ನೆರವು ನೀಡಬೇಕು.
- ರಂಗಭೂಮಿ ಕಲಾವಿದರಿಗೆ ಮಾಶಾಸನ ನೀಡಬೇಕು.
- ಕಲಾವಿದರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಹಾಗೂ ಉಚಿತ ನಿವೇಶನ ನೀಡಬೇಕು.
ಮುಖಪುಟ / ವಾರ್ತೆಗಳು












Click it and Unblock the Notifications