ಕರಿಬಸಪ್ಪ ಭಾರತ ಶ್ರೇಷ್ಠ, ಬ್ರಿಟಿಷ್ ಅಥ್ಲೆಟಿಕ್ಸ್‌ನಲ್ಲಿ ಮಾಲತಿಗೆ ಚಿನ್ನ
ಕರಿಬಸಪ್ಪ ಭಾರತ ಶ್ರೇಷ್ಠ, ಬ್ರಿಟಿಷ್ ಅಥ್ಲೆಟಿಕ್ಸ್‌ನಲ್ಲಿ ಮಾಲತಿಗೆ ಚಿನ್ನ
ಅಂಗವಿಕಲ ಕ್ರೀಡಾಪಟುಗಳ ಬ್ರಿಟಿಷ್ ಅಥ್ಲೆಟಿಕ್ಸ್‌ನಲ್ಲಿ ಕನ್ನಡಿಗರಿಂದ ಚಿನ್ನದ ಬೇಟೆ
ಶಾರ್ಟ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧಿಸಿ ಭಾರತ ಶ್ರೇಷ್ಠ ಪಡೆಯುವ ಮೂಲಕ ಸತತ ಎರಡನೇ ಬಾರಿಗೆ ಭಾರತ ಶ್ರೇಷ್ಠ ಪ್ರಶಸ್ತಿ ಪಡೆದ ಸಾಧನೆ ಕರಿಬಸಪ್ಪ ಅವರದಾಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರಿಬಸಪ್ಪ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
ಕನ್ನಡಿಗರಿಗೆ ಚಿನ್ನ : ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಅಂಗವಿಕಲ ಕ್ರೀಡಾಪಟುಗಳ ಬ್ರಿಟಿಷ್ ಅಥ್ಲೆಟಿಕ್ಸ್ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳಾದ ಕೆ.ಆರ್.ಶಂಕರ ಅಯ್ಯರ್, ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾಲತಿ ಕೆ.ಹೊಳ್ಳ, ಪಿ.ಕುಮಾರಸ್ವಾಮಿ ಹಾಗೂ ಟಿ.ಸೀತಾರಾಂ ಚಿನ್ನದ ಪದಕ ಗೆದ್ದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications