ಸೆ.27ರಿಂದ ಮೈಸೂರು ದಸರಾ, ಉದ್ಘಾಟನೆಗೆ ಸಿ.ಎನ್.ಆರ್.ರಾವ್?
ಸೆ.27ರಿಂದ ಮೈಸೂರು ದಸರಾ, ಉದ್ಘಾಟನೆಗೆ ಸಿ.ಎನ್.ಆರ್.ರಾವ್?
ಅತಿಥಿಗಳಾಗಿ ಯೋಸುದಾಸ್, ಶುಭ ಮುದಗಲ್, ನರಸಿಂಹಲು ವಡಿವಾಟಿಗೆ ಆಹ್ವಾನ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ (ಆ.19) ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಳೆದ ವರ್ಷವೂ ರಾವ್ ಅವರ ಹೆಸರೇ ದಸರಾ ಉದ್ಘಾಟಿಸಲು ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಅವರು ಉದ್ಘಾಟಿಸಲು ಸಾಧ್ಯವಾಗಿರಲಿಲ್ಲ.
ನಿಗದಿತ ಕಾರ್ಯಕ್ರಮದಂತೆ ಸೆಪ್ಟೆಂಬರ್ 27ರಂದು ದಸರಾ ಉತ್ಸವದ ಉದ್ಘಾಟನೆಯಾಗಲಿದೆ. ಸ್ವಾಗತ ಸಮಿತಿ, ಸ್ತಬ್ಧಚಿತ್ರ, ಮೆರವಣಿಗೆ, ಸಾಂಸ್ಕೃತಿಕ, ಪ್ರಚಾರ, ದೀಪಾಲಂಕಾರ, ಕ್ರೀಡೆ, ಪ್ರವಾಸೋದ್ಯಮ ಸೇರಿದಂತೆ ಮಹೋತ್ಸವಕ್ಕೆ ಹಲವಾರು ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಗಾಯಕ ಯೋಸುದಾಸ್, ಗಾಯಕಿ ಶುಭ ಮುದಗಲ್, ನರಸಿಂಹಲು ವಡಿವಾಟಿ ಮುಂತಾದವರನ್ನು ದಸರಾ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲು ಸಮಿತಿ ಶಿಫಾರಸು ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications