ಹೆಸರು ಹೇಳದೆಯೇ ದೇವೇಗೌಡರ ತರಾಟೆಗೆ ತೆರೆದುಕೊಂಡ ಕೃಷ್ಣ

ಹೆಸರು ಹೇಳದೆಯೇ ದೇವೇಗೌಡರ ತರಾಟೆಗೆ ತೆರೆದುಕೊಂಡ ಕೃಷ್ಣ
ಸರ್ಕಾರದ ಬಿಸಿಯೂಟ ಯೋಜನೆಗೆ ಬಾಲಗಂಗಾಧರ ನಾಥರ ಶ್ಲಾಘನೆ

ಮೈಸೂರು : ಕೆಲವು ಜನ ಮಠಗಳು ತಮ್ಮ ಮೂಗಿನ ನೇರಕ್ಕೇ ಇರಬೇಕು ಅಂತ ಯೋಚಿಸುತ್ತಾರೆ. ಆದರೆ ಬಾಲಗಂಗಾಧರನಾಥ ಸ್ವಾಮೀಜಿಯಂಥವರ ಸೇವೆ ಚಿರಾಯುವಾದದ್ದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೆಸರು ಹೇಳದೆಯೇ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ (ಆ.19) ಇಲ್ಲಿನ ಬಿಜಿಎಸ್‌ ಅಪೋಲೋ ಆಸ್ಪತ್ರೆಯ ಸಮಾರಂಭವೊಂದರಲ್ಲಿ ಕೃಷ್ಣ ಮಾತಾಡುತ್ತಿದ್ದರು. ಮುಖ್ಯಮಂತ್ರಿಗಳು ಬರುತ್ತೀವಿ, ಹೋಗುತ್ತೀವಿ. ಆದರೆ ಆದಿಚುಂಚನಗಿರಿ, ಸುತ್ತೂರು, ಸಿದ್ಧಗಂಗೆ ಮಠಗಳು ಮತ್ತು ಕ್ರಿಶ್ಚಿಯನ್‌ ಮಿಷನರಿಗಳು ಸಮಾಜಕ್ಕೆ ಸದಾ ಕಾಲ ಸೇವೆ ಸಲ್ಲಿಸುತ್ತಿರುತ್ತವೆ. ಮಠಗಳು ದೇಗುಲಗಳಿದ್ದಂತೆ ಎಂದರು.

ಪಕ್ಕದಲ್ಲಿ ಕೂತಿದ್ದ ಆದಿ ಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸರ್ಕಾರವನ್ನು ಬಾಯಿತುಂಬಾ ಹೊಗಳಿದರು. ಸವಾಲುಗಳ ನಡುವೆಯೂ ಕೃಷ್ಣ ಅವರ ನಡೆ ಮೆಚ್ಚತಕ್ಕದ್ದು ಎಂದ ಸ್ವಾಮೀಜಿ, ಬಿಸಿಯೂಟ ಮತ್ತು ಆರೋಗ್ಯ ಯೋಜನೆಗಳನ್ನು ಶ್ಲಾಘಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+