ತರಳಬಾಳು ಸ್ವಾಮೀಜಿಗೆ ನ್ಯೂಯಾರ್ಕ್‌ನ ಶಾಂತಿದೂತ ಪ್ರಶಸ್ತಿ
ಸ್ವಾಮೀಜಿಯ ಶಾಂತಿ ಸ್ಥಾಪನೆ ಕೆಲಸಕ್ಕೆ ಸಂದ ಗೌರವ
ಸಿರಿಗೆರೆ : ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಪ್ರತಿಷ್ಠಿತ ಶಾಂತಿ ದೂತ ಪ್ರಶಸ್ತಿ ಲಭಿಸಿದೆ. ನ್ಯೂಯಾರ್ಕ್‌ನ ಇಂಟರ್ ರಿಲೀಜಿಯಸ್ ಅಂಡ್ ಇಂಟರ್‌ನ್ಯಾಷನಲ್ ಫೆಡರೇಷನ್ ಫಾರ್ ವರ್ಲ್ಡ್‌ಪೀಸ್ ಸಂಸ್ಥೆ ಈ ಪ್ರಶಸ್ತಿ ಪ್ರಕಟಿಸಿದೆ. ಕೋಮುಗಲಭೆ ಹತ್ತಿಕ್ಕಿ, ಶಾಂತಿ ಸ್ಥಾಪನೆ ಮಾಡುವಲ್ಲಿ ಶಿವಾಚಾರ್ಯ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿ ಕೊಡಲು ನಿರ್ಧರಿಸಲಾಯಿತು ಎಂದು ಸಂಸ್ಥೆ ಹೇಳಿದೆ.