ನ್ಯೂಜಿಲೆಂಡ್ ಪಂದ್ಯದಲ್ಲಿ ನನ್ನ ಬೇರೆಯದೇ ಆಟ ನೋಡಿ- ಶೆವಾಗ್
ನ್ಯೂಜಿಲೆಂಡ್ ಪಂದ್ಯದಲ್ಲಿ ನನ್ನ ಬೇರೆಯದೇ ಆಟ ನೋಡಿ- ಶೆವಾಗ್
‘ನಾವ್ ಗೆದ್ದೇ ಗೆಲ್ತೀವಿ, ನ್ಯೂಜಿಲೆಂಡನ್ನು ಬಗ್ಗು ಬಡೀತೀವಿ’
ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ರಿಕೆಟಿಗರ ದೈಹಿಕ ಬಲ ವರ್ಧನೆ ಶಿಬಿರದಲ್ಲಿ ಭಾಗವಹಿಸಿರುವ ಶೆವಾಗ್ ಮಂಗಳವಾರ (ಆ.19) ಸುದ್ದಿಗಾರರ ಜೊತೆ ಮಾತಾಡಿದರು. ನ್ಯೂಜಿಲೆಂಡಲ್ಲಿ ನಾವು ಹೇಗೆ ಸೋತಿದ್ದೆವೋ, ಇಲ್ಲಿ ಅವರನ್ನು ಹಾಗೇ ಸೋಲಿಸುತ್ತೇವೆ ಎಂಬುದು ಶೆವಾಗ್ ಆತ್ಮವಿಶ್ವಾಸ.
ತಂಡದ ಫಿಸಿಯೋ ಆ್ಯಂಡ್ರೂ ಲೀಪಸ್ ಅವರಿಂದ ಸಣ್ಣ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಶೆವಾಗ್‌ಗೆ ಟೆಸ್ಟ್ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಸೆ. ಇತ್ತೀಚೆಗೆ ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ಪಂದ್ಯಗಳನ್ನು ಆಡಿ ಬಂದಿರುವ ಶೆವಾಗ್, ಅಲ್ಲಿ ಸಾಕಷ್ಟು ಅನುಭವ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿ ತಂಡ ಅಂತರರಾಷ್ಟ್ರೀಯ ಆಟಗಾರರನ್ನು ಬಹುವಾಗಿ ನೆಚ್ಚಿಕೊಳ್ಳುತ್ತದೆ. ವಿಕೆಟ್ ಹೋದರೂ ಚಿಂತಿಲ್ಲ ಎಂಬಂತೆ ಆಡುವ ಹಾಗಿರಲಿಲ್ಲ. ಆ ಕಾರಣಕ್ಕೇ ನೆಲಕಚ್ಚಿ ಆಡುವುದಕ್ಕೆ ಅಲ್ಲಿ ಹೆಚ್ಚು ಒತ್ತು ಕೊಟ್ಟೆ ಎನ್ನುವ ಶೆವಾಗ್‌ಗೆ ಇದೇ ತಂತ್ರವನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲೂ ಅಳವಡಿಸಿಕೊಳ್ಳುವ ಬಯಕೆ.
ಆಟಗಾರ ಮಿತ್ರರಾದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಕೌಂಟಿ ಕ್ರಿಕೆಟ್‌ನಲ್ಲಿ ಅಷ್ಟೇನೂ ಚೆನ್ನಾಗಿ ಆಡಲಿಲ್ಲ, ಯಾಕೆ ಎಂಬ ಪ್ರಶ್ನೆಗೆ ಶೆವಾಗ್ ಉತ್ತರಿಸಿದ್ದು ಹೀಗೆ- ಅವರಾಡಿದ ಪಿಚ್‌ಗಳು ಕೆಟ್ಟದಾಗಿದ್ದವು. ಚೆಂಡು ಸರಿಯಾಗಿ ಪುಟಿಯುತ್ತಿರಲಿಲ್ಲ. ಯುವರಾಜ್ ಹಾಗೂ ಕೈಫ್ ಇಬ್ಬರೂ ಆಟಗಾರರು ಸಮರ್ಥರು. ಇಲ್ಲಿ ಚೆನ್ನಾಗಿ ಆಡುತ್ತಾರೆ ಎಂಬ ವಿಶ್ವಾಸವಿದೆ.
ಗಾಯದಿಂದ ಬೇಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ ಶೆವಾಗ್ ಈ ಸಲ ನನ್ನ ಬೇರೆಯದೇ ಆಟ ತೋರಿಸುತ್ತೇನೆ ಅಂದರು. ಬೆಂಗಳೂರಿನ ಯೋಗ ಹಾಗೂ ವ್ಯಾಯಾಮ ಶಿಬಿರ ಅವರಿಗೆ ಖುಷಿ ಕೊಟ್ಟಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications