ಮಳೆ ಸುರಿವವರೆಗೆ ರಾಜ್ಯದ ಅಗತ್ಯವಿರುವೆಡೆ ಮೋಡ ಬಿತ್ತನೆ-ಕೃಷ್ಣ

ಮಳೆ ಸುರಿವವರೆಗೆ ರಾಜ್ಯದ ಅಗತ್ಯವಿರುವೆಡೆ ಮೋಡ ಬಿತ್ತನೆ-ಕೃಷ್ಣ
‘ನನಗೂ ರಾಜಕೀಯ ಮಾಡೋಕೆ ಬರುತ್ತೆ, ಮುಂದಿನ ವರ್ಷದವರೆಗೆ ಕಾಯಿರಿ’

ಮೈಸೂರು : ಬೆಂಗಳೂರು ಹೊರ ವಲಯದಲ್ಲಿ ಶುರುವಾಗಿರುವ ಮೋಡ ಬಿತ್ತನೆ ಮೂಲಕ ಮಳೆ ಸುರಿಸುವ ಪ್ರಕ್ರಿಯೆ ಎರಡು ಮೂರು ದಿನಕ್ಕೆ ನಿಂತುಹೋಗುವುದಿಲ್ಲ. ರಾಜ್ಯದಲ್ಲಿ ಎಲ್ಲೆಲ್ಲಿ ಅವಶ್ಯಕತೆಯಿದೆಯೋ ಅಲ್ಲೆಲ್ಲಾ ಸಮಸ್ಯೆ ಬಗೆಹರಿಯುವವರೆಗೆ ಮೋಡ ಬಿತ್ತನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದಾರೆ.

ಮಂಗಳವಾರ (ಆ. 19) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದ ಮುಖ್ಯಮಂತ್ರಿ ಸುದ್ದಿಗಾರರ ಜೊತೆ ಮಾತಾಡುತ್ತಾ ಈ ವಿಷಯ ತಿಳಿಸಿದರು. ಯಾವಾಗಲೂ ನೀರಿಲ್ಲ ಅನ್ನುವ ತಮಿಳುನಾಡು ಮತ್ತು ಆಂಧ್ರಪ್ರದೇಶ ಕೂಡ ಮೋಡ ಬಿತ್ತನೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಸಲಹೆ ಕೊಟ್ಟರು.

ದೆಹಲಿಯಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಯಶಸ್ವಿಯಾದರೆ, ಮಧ್ಯಂತರ ಚುನಾವಣೆ ಗ್ಯಾರಂಟಿ ಎಂದು ಕೃಷ್ಣ ಹೇಳಿದರು.

ರಾಮಕೃಷ್ಣ ಹೆಗಡೆ ಜೊತೆ ಗುಪ್ತ ಮಾತುಕತೆ ಮೂಲಕ ಜನತಾ ಪರಿವಾರದ ವಿಲೀನ ಪ್ರಕ್ರಿಯೆಗೆ ಎಡರು ಹಾಕುತ್ತಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲ ಎಂಬ ಪ್ರಶ್ನೆಗೆ, ‘ಅವರೀಗ ರಾಜಕೀಯ ಮಾಡುತ್ತಿದ್ದಾರೆ. ನನಗೆ ಇನ್ನೂ ಟೈಂ ಇದೆ. ಮುಂದಿನ ವರ್ಷ ಜನವರಿವರೆಗೆ ಕಾಯಿರಿ. ನನಗೂ ರಾಜಕೀಯ ಮಾಡೋಕೆ ಬರುತ್ತೆ’ ಅಂತ ಉತ್ತರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+