ಕನ್ನಡ ಸಂಸ್ಕೃತಿ ಇಲಾಖೆಯಿಂದ ಮರೆಯಲಾಗದ ಮಹಾನುಭಾವರು
ಕನ್ನಡ ಸಂಸ್ಕೃತಿ ಇಲಾಖೆಯಿಂದ ಮರೆಯಲಾಗದ ಮಹಾನುಭಾವರು
ಸೆಪ್ಟಂಬರ್ ತಿಂಗಳ ಮನೆಯಂಗಳದ ಮಾತುಕತೆಯಲ್ಲಿ ಭೈರಪ್ಪ
ಸಾಹಿತ್ಯ- ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿ ಅಗಲಿರುವ ಗಣ್ಯ ವ್ಯಕ್ತಿಗಳ ಬದುಕು ಹಾಗೂ ಸಾಧನೆಗಳನ್ನು ಮರೆಯಲಾಗದ ಮಹನೀಯರು ಕಾರ್ಯಕ್ರಮದಲ್ಲಿ ಸ್ಮರಿಸಲಾಗುವುದು. ಸೆಪ್ಟೆಂಬರ್ 6ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವೈ. ಕೆ. ಮುದ್ದುಕೃಷ್ಣ http://www.thatskannada.com ತಿಳಿಸಿದ್ದಾರೆ.
ಪ್ರತಿ ತಿಂಗಳ ಮೊದಲ ಶನಿವಾರ ಮರೆಯಲಾಗದ ಮಹನೀಯರು ಕಾರ್ಯಕ್ರಮ ನಡೆಯಲಿದ್ದು , ಸೆಪ್ಟೆಂಬರ್ 6ರ ಮೊದಲ ಕಾರ್ಯಕ್ರಮದಲ್ಲಿ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮನೆಯಂಗಳದಲ್ಲಿ ಭೈರಪ್ಪ : ಸೆಪ್ಟೆಂಬರ್ ತಿಂಗಳ ಮೂರನೇ ಶನಿವಾರದಂದು ನಡೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅತಿಥಿಯಾಗಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications