ಆಂಧ್ರ: ಬಾವಿಗೆ ಬಿದ್ದ ವ್ಯಾನ್, 14 ಶಾಲಾ ಮಕ್ಕಳು ಜಲ ಸಮಾಧಿ
ಆಂಧ್ರ: ಬಾವಿಗೆ ಬಿದ್ದ ವ್ಯಾನ್, 14 ಶಾಲಾ ಮಕ್ಕಳು ಜಲ ಸಮಾಧಿ
ತತ್ತರಗೊಂಡ ಕರೀಂನಗರ ಜಿಲ್ಲೆಯ ದೇಶರಾಜಪಲ್ಲಿ
ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ದೇಶರಾಜಪಲ್ಲಿಯಲ್ಲಿ ಆಗಸ್ಟ್ 19ರ ಮಂಗಳವಾರ ಈ ದುರ್ಘಟನೆ ಸಂಭವಿಸಿದೆ. ದೇಶರಾಜಪಲ್ಲಿಯ ಮಾತಾ ಶಾಲೆಗೆ ಮಕ್ಕಳನ್ನು ಒಯ್ಯುತ್ತಿದ್ದ ವ್ಯಾನ್, ಬೆಳಗ್ಗೆ 9.20ರ ಸುಮಾರಿಗೆ ಬಾವಿಗೆ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಯಾಳಗಿನಿಂದ 10 ದೇಹಗಳನ್ನು ಹೊರ ತೆರೆಯಲಾಗಿದೆ. ಪತ್ತೆಯಾದ ಮೃತ ದೇಹಗಳಲ್ಲಿ ಚಾಲಕನ ದೇಹವೂ ಸೇರಿದೆ. ಗಾಯಗೊಂಡ ಮಕ್ಕಳನ್ನು ಕರೀಂನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದು , ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications