ಸ್ವಾಮೀಜಿಗಳೆಲ್ಲ ಸೇರಿದರು, ಬಸವ ಧರ್ಮ ಕಟ್ಟಲು ಮನ ಮಾಡಿದರು
ಸ್ವಾಮೀಜಿಗಳೆಲ್ಲ ಸೇರಿದರು, ಬಸವ ಧರ್ಮ ಕಟ್ಟಲು ಮನ ಮಾಡಿದರು
ವೀರ ಶೈವ ಮಠಾಧೀಶರ ಮಹತ್ವದ ನಿರ್ಣಯ
ವೀರಶೈವ ಮಠಾಧೀಶರೆಲ್ಲ ಚಿತ್ರದುರ್ಗದ ಬಸವ ಮಂಟಪದಲ್ಲಿ ಶಿವಮೂರ್ತಿ ಸ್ವಾಮೀಜಿ ನೈತೃತ್ವದಲ್ಲಿ ಬಸವ ಧರ್ಮ ಎಂಬ ಹೆಸರಿನ ಹೊಸ ಧರ್ಮ ಸ್ಥಾಪನೆಗೆ ನಿರ್ಧರಿಸಿದರು. ಈ ಧರ್ಮ ಪಕ್ಕಾ ಬಸವ ತತ್ತ್ವಗಳನ್ನು ಆಧರಿಸಿರುತ್ತದೆ. ಬೇರೆ ಯಾವುದೇ ತತ್ತ್ವ ನುಸುಳಲು ಅವಕಾಶ ಕೊಡುವುದಿಲ್ಲ ಎಂದು ಪ್ರೊ.ಶರಭೇಂದ್ರಯ್ಯ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಸ್ವಾಮೀಜಿ, ಹೊಸ ಧರ್ಮ ಸ್ಥಾಪನೆಗೆ ವೀರ ಶೈವ ಮಠಾಧೀಶರು ಹಾಗೂ ಅವುಗಳ ನೂರಾರು ಅನುಯಾಯಿಗಳು ಸಮ್ಮತಿ ಸೂಚಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಧರ್ಮವನ್ನು ಪ್ರಚಾರ ಮಾಡುವ ಸಲುವಾಗಿ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಬಸವ ಧರ್ಮ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ಈ ಧರ್ಮಕ್ಕೆ ಸೇರಬಯಸುವ ಸಕಲರಿಗೂ ಬಾಗಿಲು ತೆರೆದಿರುತ್ತದೆ ಎಂದು ಶಿವಮೂರ್ತಿ ಸ್ವಾಮೀಜಿ ಕರೆ ಕೊಟ್ಟರು. ಹೊಸ ಧರ್ಮ ಪ್ರಚಾರಕ್ಕೆ ನಿಧಿ ಕೂಡ ಸಿದ್ಧವಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications