ಸಚಿನ್, ಬೆಳವಾಡಿ, ನಿಖಿಲ್ ಜೋಶಿಗೆ ರಾಜೀವ್ ಯುವ ಶಕ್ತಿ ಪ್ರಶಸ್ತಿ
ಸಚಿನ್, ಬೆಳವಾಡಿ, ನಿಖಿಲ್ ಜೋಶಿಗೆ ರಾಜೀವ್ ಯುವ ಶಕ್ತಿ ಪ್ರಶಸ್ತಿ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಒಟ್ಟು 13 ಯುವ ಪ್ರತಿಭೆಗಳಿಗೆ ಕರ್ನಾಟಕದ ಗೌರವ
ಕರ್ನಾಟಕ ಸರ್ಕಾರ ಹೊಸದಾಗಿ ಈ ಪ್ರಶಸ್ತಿಯನ್ನು ಪ್ರಾರಂಭಿಸುತ್ತಿದ್ದು- ತೆಂಡೂಲ್ಕರ್‌ಗೆ ‘ವಿಶ್ವ ವಿಜೇತ’ ಹಾಗೂ ಕುಂಬ್ಳೆಗೆ ‘ಮಯೂರ’ ಹಾಗೂ ಗಂಗೂಲಿಗೆ ‘ವಿಜಿಗಿಸು’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ (ಆ.18) ಸುದ್ದಿಗಾರರಿಗೆ ತಿಳಿಸಿದರು. ರಾಜೀವ್ ಯುವ ಶಕ್ತಿ ಸಂಘದ ಕಾರ್ಯಕ್ರಮಗಳ ಮೇಲ್ವಿಚಾರಣೆಯ ಹೊಣೆಯನ್ನು ಶಿವಕುಮಾರ್ ಹೊತ್ತಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಿಂದ ಯುವಕರನ್ನು ಸಂಘಟಿಸುವ ಸಲುವಾಗಿ ರಾಜೀವ್ ಯುವ ಶಕ್ತಿ ಸಂಘವನ್ನು ರಾಜ್ಯಾದ್ಯಂತ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ 2003ನೇ ಇಸವಿಯ ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದರು.
ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 13 ಯುವಕ/ಯುವತಿಯರನ್ನು ಪ್ರಶಸ್ತಿಗೆ ಆರಿಸಲಾಗಿದೆ.
ಪ್ರಶಸ್ತಿ ಪಡೆದ ಇತರರು
ದೈಹಿಕ ತೊಂದರೆಯ ನಡುವೆಯೂ ಬ್ಯಾಡ್ಮಿಂಟನ್ ಆಡುತ್ತಿರುವ ರಂಜನಿ ರಾಮಾನುಜಂ, ಖೋಖೋ ಆಟಗಾರ್ತಿ ಶೋಭಾ ನಾರಾಯಣ್, ಹಿಲರಿ ಕ್ಲಿಂಟನ್ ನೆನಪಿನಂಗಳ ಸೇರುವಂಥ ಪದ್ಯ ಬರೆದಿರುವ ಅನಸೂಯ ಸೇನ್ ಗುಪ್ತ - (ಇವರೆಲ್ಲರಿಗೆ ಪ್ರತಿಭಾ ಶ್ರೀ ಪ್ರಶಸ್ತಿ).
ಕಬಡ್ಡಿ ಆಟಗಾರ ಹೊನ್ನಪ್ಪ, ದೈಹಿಕ ತೊಂದರೆಯಿದ್ದೂ ಸಾಧನೆ ಮಾಡುತ್ತಿರುವ ಅಥ್ಲೀಟ್ ಬೋನಿ ವಿ. ಪ್ರಭು ಪ್ರತಿಭಾ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿಖಿಲ್ ಜೋಶಿ ಹಾಗೂ ಪ್ರಕಾಶ್ ಬೆಳವಾಡಿ ಆಯ್ಕೆಯಾಗಿರುವುದೂ ಇದೇ ಪ್ರಶಸ್ತಿಗೆ .
(ಪಿಟಿಐ)












Click it and Unblock the Notifications