ಚಿತ್ರದುರ್ಗ: ವಿಧವೆ ಮತ್ತು ವಿಚ್ಛೇದಿತ ಮಹಿಳೆಗೆ ಮತ್ತೆ ಕಂಕಣಭಾಗ್ಯ
ಚಿತ್ರದುರ್ಗ: ವಿಧವೆ ಮತ್ತು ವಿಚ್ಛೇದಿತ ಮಹಿಳೆಗೆ ಮತ್ತೆ ಕಂಕಣಭಾಗ್ಯ
ಮುರುಘರಾಜೇಂದ್ರ ಶರಣರ ನೇತೃತ್ವದಲ್ಲಿ ಆದರ್ಶ ವಿವಾಹ
ವಿಚ್ಛೇದಿತ ಮಹಿಳೆ ಹಾಗೂ ಓರ್ವ ವಿಧವೆ ಆ.17ರ ಭಾನುವಾರ ದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ಆದರ್ಶ ಕಲ್ಯಾಣ ಮಹೋತ್ಸವದಲ್ಲಿ ಮತ್ತೆ ಸಪ್ತಪದಿ ತುಳಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೇವಿಹಳ್ಳಿಯ ಕಾಫಿ ಪ್ಲಾಂಟರ್ ರವಿಚಂದ್ರ ಹಾಗೂ ವಿಚ್ಛೇದಿತ ಮಹಿಳೆ ಚಿತ್ರದುರ್ಗದ ಚಂದ್ರಿಕಾ ಸತಿಪತಿಗಳಾದರು. ಅದೇ ರೀತಿ- ತುಮಕೂರು ಜಿಲ್ಲೆಯ ಡಿ.ಓ.ರಾಮಸ್ವಾಮಿ ಎನ್ನುವ ವ್ಯಕ್ತಿ ಚಿತ್ರದುರ್ಗದ ರಾಜಮ್ಮ ಎನ್ನುವ ವಿಧವೆಗೆ ಮತ್ತೆ ದಾಂಪತ್ಯ ಜೀವನ ನೀಡಿದರು.
ಆದರ್ಶ ವಿವಾಹಗಳನ್ನು ಸ್ವಾಗತಿಸಿ ಮಾತನಾಡಿದ ಮುರುಘರಾಜೇಂದ್ರ ಶರಣರು- ಆದರ್ಶದ ಹೆಜ್ಜೆಯಲ್ಲಿ ಸಂಘರ್ಷಗಳು ಸಹಜ. ಆದರೆ, ಈ ಸಂಘರ್ಷಗಳಿಗೆ ಅಂಜಬಾರದು. ಆದರ್ಶ ಎನ್ನುವುದು ಬಾಯಿ ಮಾತು ಮಾತ್ರವಾಗದೆ ಸಮಾಜ ಕಲ್ಯಾಣಕ್ಕೆ ಪೂರಕವಾಗಬೇಕು ಎಂದರು.
ಶಾಸಕ ಎ. ಚಂದ್ರಪ್ಪ ಆದರ್ಶ ಕಲ್ಯಾಣ ಮಹೋತ್ಸದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications