ದೆಹಲಿಯಲ್ಲಿ ತಲೆಯೆತ್ತಲಿದೆ ಕನ್ನಡ ಸಂಘದ ಸಾಂಸ್ಕೃತಿಕ ಸಂಕೀರ್ಣ
ದೆಹಲಿಯಲ್ಲಿ ತಲೆಯೆತ್ತಲಿದೆ ಕನ್ನಡ ಸಂಘದ ಸಾಂಸ್ಕೃತಿಕ ಸಂಕೀರ್ಣ
5.5. ಕೋಟಿ ರುಪಾಯಿ ವೆಚ್ಚದ ಸಂಕೀರ್ಣ 50,000 ಕನ್ನಡಿಗರಿಗೆ ಸಂಘದ ಕೊಡುಗೆ
5.5 ಕೋಟಿ ರುಪಾಯಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಿತವಾಗಲಿದ್ದು, ದೆಹಲಿಯಲ್ಲಿರುವ 50 ಸಾವಿರ ಕನ್ನಡಿಗರಿಗೆ ಇದು ಸಂಘದ ಸುವರ್ಣ ಮಹೋತ್ಸವದ ಕೊಡುಗೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ದಿವಸ ಸಂಘದ ಅಧ್ಯಕ್ಷ ನಾಗರಾಜ್, ವರನಟ ಡಾ. ರಾಜ್‌ಕುಮಾರ್ ಅವರ ನಿವಾಸಕ್ಕೆ ತೆರಳಿ ಚಿತ್ರಲೋಕದಲ್ಲಿ 50 ವರ್ಷಗಳ ಸಾರ್ಥಕ ಜೀವನ ನಡೆಸಿದ್ದಕ್ಕೆ ಅವರನ್ನು ಸನ್ಮಾನಿಸಿದರು.
ದೆಹಲಿ ಕನ್ನಡಿಗರ ಸಂಕೀರ್ಣ ಕಟ್ಟುವ ಯೋಜನೆಗೆ ಕರ್ನಾಟಕ ಸರ್ಕಾರ 1 ಕೋಟಿ ರುಪಾಯಿ ಹಣ ಮಂಜೂರು ಮಾಡಿದೆ. ಸಂಘದ ಏಳಿಗೆಗಾಗಿ ಅಳಿಲು ಕಾಣಿಕೆ ಸಲ್ಲಿಸುವ ಕನ್ನಡಿಗರಿಗೆ ಸ್ವಾಗತವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಸೆಕ್ಟಾರ್ 12, ರಾವ್ ತುಲಾರಾಂ ಮಾರ್ಗ್, ಆರ್.ಕೆ.ಪುರಂ, ನವ ದೆಹಲಿ- 110022. ದೂರವಾಣಿ ಸಂಖ್ಯೆ 26109615/ 26105726.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications