ಸಮಾನ ಸಂಹಿತೆ ಬೇಕು-ಹಿರಣ್ಣಯ್ಯ, ಪ್ರಸ್ತುತ ಜಾರಿ ಕಷ್ಟ-ಸದಾಶಿವ

ಸಮಾನ ಸಂಹಿತೆ ಬೇಕು-ಹಿರಣ್ಣಯ್ಯ, ಪ್ರಸ್ತುತ ಜಾರಿ ಕಷ್ಟ-ಸದಾಶಿವ
ದೀನ ದಯಾಳ್‌ ವಿಚಾರ ವೇದಿಕೆಯಿಂದ ಸಮಾನ ನಾಗರಿಕ ಸಂಹಿತೆ ಕುರಿತು ಗೋಷ್ಠಿ

ಬೆಂಗಳೂರು : ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವಾಗಿದ್ದು ಅದನ್ನು ಜಾರಿಗೊಳಿಸಬೇಕು ಎಂದು ಜನಪ್ರಿಯ ರಂಗ ಕಲಾವಿದ ಮಾಸ್ಟರ್‌ ಹಿರಣ್ಣಯ್ಯ ಅಭಿಪ್ರಾಯಪಟ್ಟರು.

ಭಾರತೀಯತೆಯೇ ಶ್ರೇಷ್ಠ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಲು ಏಕರೂಪ ನಾಗರಿಕ ಸಂಹಿತೆ ಅತ್ಯಗತ್ಯ. ವಿವಿಧ ಧರ್ಮಗಳು ಆಚರಣೆಯಲ್ಲಿರುವ ದೇಶದಲ್ಲಿ ಏಕಮುಖ ಚಿಂತನೆಗೆ ಸಮಾನ ನಾಗರಿಕ ಸಂಹಿತೆ ಅವಕಾಶ ಕಲ್ಪಿಸುತ್ತದೆ ಎಂದು ಹಿರಣ್ಣಯ್ಯ ಹೇಳಿದರು. ಪಂಡಿತ್‌ ದೀನದಯಾಳ್‌ ವಿಚಾರ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಣ್ಣಯ್ಯ ಉಪನ್ಯಾಸ ನೀಡುತ್ತಿದ್ದರು.

ರಾಜಕಾರಣಿಗಳು ಬಿತ್ತಿರುವ ಕೆಟ್ಟ ಬೀಜಗಳಿಂದಾಗಿ ನಾವು ಪರಸ್ಪರ ಕಚ್ಚಾಡುತ್ತಿದ್ದೇವೆ. ಬ್ರಿಟೀಷರು ಬಿಟ್ಟು ಹೋದ ಒಡೆದು ಆಳುವ ನೀತಿಯನ್ನು ರಾಜಕಾರಣಿಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಇಂಥ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆ ಅತ್ಯಗತ್ಯ ಎಂದು ಹಿರಣ್ಣಯ್ಯ ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಸಮಾನ ನಾಗರಿಕ ಸಂಹಿತೆ ಜಾರಿಯಾಗುವಲ್ಲಿನ ತೊಡಕುಗಳ ಕುರಿತು ಪ್ರಸ್ತಾಪಿಸಿದರು. ಉಳಿದ ದೇಶಗಳ ಮಾದರಿಯಲ್ಲಿ ಭಾರತದಲ್ಲಿಯೂ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕೆಂದು ಸಂವಿಧಾನಕಾರರು ಅಭಿಪ್ರಾಯಪಟ್ಟಿದ್ದರು. ಕಾಲ ಪಕ್ವವಾದಾಗ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಬೇಕೆಂಬುದು ಸಂವಿಧಾನಕಾರರ ನಿರ್ದೇಶನ. ಆದರೆ, ಪ್ರಸಕ್ತ ಸಂದರ್ಭದಲ್ಲಿ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಕಷ್ಟಕರ ಎಂದು ನ್ಯಾಯಮೂರ್ತಿ ಸದಾಶಿವ ಹೇಳಿದರು.

ಏಕರೂಪ ನಾಗರಿಕ ಸಂಹಿತೆಯ ಕುರಿತು ಅಪ ಪ್ರಚಾರ ನಡೆಯುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ವಿನಯಚಂದ್ರ ದೂರಿದರು. ಪಂಡಿತ್‌ ದೀನದಯಾಳ್‌ ವಿಚಾರ ವೇದಿಕೆಯ ಸಂಚಾಲಕ ರಾಮದಾಸ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+