ಹುತಾತ್ಮ ಯೋಧ ಸಂಜೋಗ್ ಛಾತ್ರೆಗೆ ಅಶೋಕ ಚಕ್ರ ಪುರಸ್ಕಾರ
ಹುತಾತ್ಮ ಯೋಧ ಸಂಜೋಗ್ ಛಾತ್ರೆಗೆ ಅಶೋಕ ಚಕ್ರ ಪುರಸ್ಕಾರ
ರಾಜ್ಯದ 13 ಪೊಲೀಸರಿಗೆ ರಾಷ್ಟ್ರಪತಿ ಪದಕ
ಸಂಜೋಗ್ ಛಾತ್ರೆ ಅವರು ಒಂದು ಕೈಕಳಕೊಂಡರೂ ಅಳುಕದೆ, ಉಳಿದೊಂದು ಕೈಯಲ್ಲೇ ಭಯೋತ್ಪಾದಕರ ವಿರುದ್ಧ ಹೋರಾಡಿ ಮೂವರು ಭಯೋತ್ಪಾದಕರನ್ನು ಕೊಂದು ಅಸು ನೀಗಿದ್ದರು. ಉತ್ತರ ಸಿಕ್ಕಿಂನ ನಮ್ಚಿ ಪ್ರದೇಶದ ಸಂಜೋಗ್‌ಅವರಿಗೆ ಶಾಂತಿಕಾಲದ ವೀರೋಚಿತ ಗೌರವ ಅಶೋಕ ಚಕ್ರ ಸಂದಿದೆ.
57 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶ ರಕ್ಷಣೆಯಲ್ಲಿ ಅಸಾಮಾನ್ಯ ಶೌರ್ಯ ಪ್ರದರ್ಶಿಸಿದ 275 ಮಂದಿಗೆ ಕೀರ್ತಿ ಚಕ್ರ, ಶೌರ್ಯ ಚಕ್ರ, ಸೇನಾ ಪದಕ, ನವ ಸೇನಾ ಪದಕ ಮತ್ತು ಏರ್ ಚೀಫ್ ಕಮಾಂಡನೇಷನ್ಸ್ ಗೌರವವನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ ರಾಜಶೇಖರ್‌ಗೆ ಶ್ರಮ ಪ್ರಶಸ್ತಿ
ನಗರದ ಬಿಎಚ್‌ಇಎಲ್ ಕಂಪೆನಿಯ ಎನ್.ರಾಜಶೇಖರ್ ಸೇರಿದಂತೆ ಒಟ್ಟು 38 ಜನರಿಗೆ 2003ನೇ ಸಾಲಿನ ಶ್ರಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. 2 ಲಕ್ಷ ರೂ. ನಗದು ಹಾಗೂ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
ರಾಷ್ಟ್ರಪತಿಗಳ ಪದಕ : ಕರ್ನಾಟಕ ವಿಶ್ವ ವಿದ್ಯಾಲಯದ ಕುಲ ಸಚಿವ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ವೈ.ಆರ್.ಪಾಟೀಲ್, ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮೀಷನರ್ ಎಂ.ಲಕ್ಷ್ಮಣ್ ಹಾಗೂ ಬಿಎಸ್‌ಎಫ್‌ಸಿ ಸುಧೀರ್ ಕುಮಾರ್ ಸಕ್ಸೇನಾ ಸೇರಿದಂತೆ ರಾಜ್ಯದ 13 ಮಂದಿಗೆ ಶ್ಲಾಘನೀಯ ಸೇವೆಗಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications