‘ವೀರಪ್ಪನ್ ಬೇಟೆ ಅರ್ಥಹೀನ, ಕೃಷ್ಣ ದ್ರಾವಿಡ ಪ್ರಾಣಾಯಾಮ ನಿಲ್ಲಿಸಿ’
‘ವೀರಪ್ಪನ್ ಬೇಟೆ ಅರ್ಥಹೀನ, ಕೃಷ್ಣ ದ್ರಾವಿಡ ಪ್ರಾಣಾಯಾಮ ನಿಲ್ಲಿಸಿ’
ನಿವೃತ್ತ ಸೂಪರ್ ಕಾಪ್ ಸಾಂಗ್ಲಿಯಾನ ಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ
ಗುರುವಾರ (ಆ.13) ಪತ್ರದ ಪ್ರತಿಯನ್ನು ಸಾಂಗ್ಲಿಯಾನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಕಳೆದ ಮೂರು ವರ್ಷಗಳಲ್ಲಿ ವೀರಪ್ಪನ್ ಯಾವ ಎಸ್‌ಟಿಎಫ್ ಪೊಲೀಸನ ಕಣ್ಣಿಗೂ ಬಿದ್ದಿಲ್ಲ. ತಮಿಳುನಾಡಿನ ಎಸ್‌ಟಿಎಫ್ ಮುಖ್ಯಸ್ಥ ವಾಲ್ಟಾರ್ ದೇವಾರಂ ಸೇರಿದಂತೆ ಬಹುತೇಕರು ಸುಮ್ಮನೆ ಪೊಳ್ಳು ಭರವಸೆಗಳನ್ನು ಕೊಡುತ್ತಾ ಬಂದರು. ನಾನು ಅವತ್ತಿನಿಂದಲೂ ವೀರಪ್ಪನ್ ಶಿಕಾರಿ ಅರ್ಥಹೀನ ಅಂತಲೇ ಪ್ರತಿಪಾದಿಸುತ್ತಾ ಬಂದಿದ್ದೇನೆ ಎಂದು ಸಾಂಗ್ಲಿಯಾನ ಪತ್ರದಲ್ಲಿ ಬರೆದಿದ್ದಾರೆ.
ನಾನು ಹೇಳಿದ ಮಾತನ್ನು ಇಟ್ಟುಕೊಂಡು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜನರ ಮುಂದೆ ಎರಡು ಬಾರಿ ಲೇವಡಿ ಮಾಡಿದರು. ಜನರ ಹಣವನ್ನು ಸುಮ್ಮನೇ ಹಾಳು ಮಾಡಬೇಡಿ ಅನ್ನೋದು ನನ್ನ ಕಳಕಳಿಯ ಮನವಿ. ಇನ್ನಾದರೂ ವೀರಪ್ಪನ್ ಶಿಕಾರಿಯೆಂಬ ಹುಚ್ಚು ಸಾಹಸವನ್ನು ಸರ್ಕಾರ ಬಿಡಲಿ ಎಂದು ಸಾಂಗ್ಲಿಯಾನ ಕರೆ ಕೊಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications