ಮಲ್ಲಿಗೆ ಕವಿ ನರಸಿಂಹಸ್ವಾಮಿ ತೊಡೆಗೆ ಪೆಟ್ಟು , ಆಸ್ಪತ್ರೆಗೆ ದಾಖಲು
ಮಲ್ಲಿಗೆ ಕವಿ ನರಸಿಂಹಸ್ವಾಮಿ ತೊಡೆಗೆ ಪೆಟ್ಟು , ಆಸ್ಪತ್ರೆಗೆ ದಾಖಲು
ಕನ್ನಡದ ಹಿರಿಯ ಲೇಖಕರಿಗಿದು ಅನಾರೋಗ್ಯದ ಕಾಲ
ಮಂಚದ ಮೇಲೆ ಕುಳಿತುಕೊಳ್ಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿರುವ ನರಸಿಂಹಸ್ವಾಮಿ ಅವರ ತೊಡೆಯ ಮೂಳೆಗೆ ಪೆಟ್ಟಾಗಿದೆ. 88 ರ ವಯಸ್ಸಿನ ನರಸಿಂಹಸ್ವಾಮಿ ಅವರಿಗೆ ದೃಷ್ಟಿ ಮಂಜಾಗಿದ್ದು , ನಿಶ್ಶಕ್ತಿಯಿಂದ ಬಳಲುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಪಂಪ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಶತಾಯುಷಿ ಎ.ಎನ್.ಮೂರ್ತಿರಾವ್ ಅವರು ಕೂಡ ಮೂಳೆಗೆ ಪೆಟ್ಟು ಮಾಡಿಕೊಂಡು ಗಾಯಗೊಂಡಿದ್ದರು. ಪ್ರಸ್ತುತ ಮೂರ್ತಿರಾವ್ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications