ನಡೆಮುಂದೆ, ನುಗ್ಗಿ ನಡೆಮುಂದೆ- ಎಸ್‌ಟಿಎಫ್‌ಗೆ ಖರ್ಗೆ ಆ್ಯಕ್ಸಲೇಟರ್
ನಡೆಮುಂದೆ, ನುಗ್ಗಿ ನಡೆಮುಂದೆ- ಎಸ್‌ಟಿಎಫ್‌ಗೆ ಖರ್ಗೆ ಆ್ಯಕ್ಸಲೇಟರ್
‘ಇನ್ನೊಂದು ತಿಂಗಳಲ್ಲಿ ಕೇಂದ್ರದಿಂದ ಆಧುನಿಕ ಶಸ್ತ್ರಾಸ್ತ್ರ’
ಎಸ್‌ಟಿಎಫ್ ಕಾರ್ಯಾಚರಣೆ ಪರಿಶೀಲನಾ ಸಭೆಯ ನಂತರ ಶುಕ್ರವಾರ (ಆ.14) ಸುದ್ದಿಗಾರರ ಜತೆ ಖರ್ಗೆ ಮಾತಾಡುತ್ತಿದ್ದರು. ಎಕೆ 47 ಬಂದೂಕುಗಳು, ಗ್ರೆನೇಡ್‌ಗಳು ಹಾಗೂ ನೈಟ್ ಕ್ಯಾಮೆರಾಗಳನ್ನು ಎಸ್‌ಟಿಎಫ್‌ಗೆ ಒದಗಿಸಿ ಎಂದು ಕೇಂದ್ರ ಸರ್ಕಾರವನ್ನು 9 ತಿಂಗಳ ಹಿಂದೆ ಕೇಳಿದ್ದೆವು. ಈ ಬೇಡಿಕೆಯ ಪಟ್ಟಿಯಲ್ಲಿ ನಮ್ಮ ಸರತಿ ಹತ್ತಿರಾಗಿದೆ. ಇನ್ನೊಂದು ತಿಂಗಳಲ್ಲಿ ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದರು.
ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಟಿ. ಮಡಿಯಾಳ್, ಕರ್ನಾಟಕ ಎಸ್‌ಟಿಎಫ್ ಕಮಾಂಡರ್ ಜ್ಯೋತಿ ಪ್ರಕಾಶ್ ಮಿರ್ಜಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುಭಾಶ್ ಭರಣಿ, ರಾಜ್ಯ ಭದ್ರತಾ ಸಲಹೆಗಾರ ಟಿ.ಶ್ರೀನಿವಾಸುಲು ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವೀರಪ್ಪನ್ ಶಿಕಾರಿ ನಿಲ್ಲಿಸಿ ಎಂಬ ಎಚ್.ಟಿ.ಸಾಂಗ್ಲಿಯಾನ ಕರೆಯನ್ನು ತಿರಸ್ಕರಿಸಿದ ಖರ್ಗೆ, ಯಾರೋ ಏನೋ ಹೇಳುತ್ತಾರೆ ಅಂತ ವೀರಪ್ಪನ್ ಬೇಟೆ ನಿಲ್ಲಿಸುವುದಿಲ್ಲ. ಎಸ್‌ಟಿಎಫ್‌ಗೆ ಕಾರ್ಯತಂತ್ರ ರೂಪಿಸುವ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಬೇಟೆ ಚುರುಕಾಗುತ್ತದೆ ಎಂದು ಖಂಡಾತುಂಡಾಗಿ ಹೇಳಿದರು. ಮಲೆ ಮಹದೇಶ್ವರ ಕಾಡಿನಲ್ಲಿ ಈ ಸಲ ಹೆಚ್ಚು ಮಳೆ ಸುರಿಯುತ್ತಿಲ್ಲ. ಅಲ್ಲಿನ ಜನರು ಕೂಡ ವೀರಪ್ಪನ್ ವಿಷಯದಲ್ಲಿ ಈಗ ಬಾಯಿ ಬಿಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೀರಪ್ಪನ್ ಶಿಕಾರಿ ಪ್ರಕ್ರಿಯೆಯನ್ನು ಇನ್ನೂ ಚುರುಕುಗೊಳಿಸುವಂತೆ ಸೂಚಿಸಿದ್ದೇನೆ ಎಂದರು.
ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಗುಂಡಿನ ಸದ್ದು ಕೇಳಿಬಂದ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಅದು ನಕ್ಸಲೇಟರ ಚಟುವಟಿಕೆ ಎಂದು ಕೆಲವರು ಸುಮ್ಮನೆ ಹುಯಿಲೆಬ್ಬಿಸುತ್ತಿದ್ದಾರೆ. ಕಾಡುವಾಸಿಗಳನ್ನು ಹೆದರಿಸಲು ಯಾರೋ ಕಿಡಿಗೇಡಿಗಳು ಆ ಕೆಲಸ ಮಾಡಿದ್ದಾರಷ್ಟೆ ಎಂದು ಹೇಳಿದರು.
(ಪಿಟಿಐ)
ವಾರ್ತಾ ಸಂಚಯ
ವೀರಪ್ಪನ್ ಬೇಟೆ ಅರ್ಥಹೀನ, ಸಾಕುಮಾಡಿ ದ್ರಾವಿಡ ಪ್ರಾಣಾಯಾಮ
ಮುಖಪುಟ / ವಾರ್ತೆಗಳು












Click it and Unblock the Notifications