ಆ.18ರಂದು ಬಿಸ್ಮಿಲ್ಲಾ ಖಾನ್‌-ಅಮ್ಜದ್‌ ಆಲಿಖಾನ್‌ ಜುಗಲ್‌ಬಂದಿ

ಆ.18ರಂದು ಬಿಸ್ಮಿಲ್ಲಾ ಖಾನ್‌-ಅಮ್ಜದ್‌ ಆಲಿಖಾನ್‌ ಜುಗಲ್‌ಬಂದಿ
ಕಾರ್ಗಿಲ್‌ ಯೋಧರ ಸ್ಮರಣಾರ್ಥ ಅಮರಜ್ಯೋತಿ ಕಾರ್ಯಕ್ರಮ

ನವದೆಹಲಿ: ‘ರಸ್‌ ಬರ್‌ಸೇ’ ಶಹನಾಯಿ ವಾದನ ಕಾರ್ಯಕ್ರಮದ ಮೂಲಕ ಪಾರ್ಲಿಮೆಂಟಿನಲ್ಲಿ ಸಂಸದರ ಮನ ಗೆದ್ದ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಹಾಗೂ ಪ್ರಸಿದ್ಧ ಸರೋದ್‌ ವಾದಕ ಉಸ್ತಾದ್‌ ಅಮ್ಜದ್‌ ಆಲಿ ಖಾನ್‌ ಪ್ರಪ್ರಥಮ ಬಾರಿಗೆ ವೇದಿಕೆಯಾಂದರಲ್ಲಿ ಜೊತೆಯಾಗಲಿದ್ದಾರೆ.

ರಾಷ್ಟ್ರಕ್ಕಾಗಿ ಪ್ರಾಣತೆತ್ತ ಯೋಧರ ನೆನಪಿಗಾಗಿ ಅಮರ ಜ್ಯೋತಿ ಎಂಬ ಸಂಗೀತ ಕಚೇರಿಯಾಂದನ್ನು ದೆಹಲಿಯಲ್ಲಿ ಆಯೋಜಿಸಲಾಗಿದೆ. ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಶಹನಾಯಿ ಹಾಗೂ ಉಸ್ತಾದ್‌ ಅಮ್ಜದ್‌ ಆಲಿ ಖಾನ್‌ ಅವರ ಸರೋದ್‌ ವಾದನದ ಜುಗಲ್‌ಬಂದಿ ಕಾರ್ಯಕ್ರಮ ಆಗಸ್ಟ್‌ 18ರಂದು ಸಂಗೀತ ಪ್ರಿಯರ ಮನ ತಣಿಸಲಿದೆ.

ಕಾರ್ಗಿಲ್‌ ಯುದ್ಧದಲ್ಲಿ ಹತರಾದ ಯೋಧರ ಸ್ಮಾರಕಾರ್ಥ ಪಂಡಿತ್‌ ಚತುರಲಾಲ್‌ ಸ್ಮಾರಕ ಸಮಾಜವು ಈ ಜುಗಲ್‌ಬಂದಿ ಕಾರ್ಯಕ್ರಮವನ್ನು ದೆಹಲಿಯ ತಾಲ್‌ಕಟೋರ ಸ್ಟೇಡಿಯಂನಲ್ಲಿ ಆಯೋಜಿಸಿದೆ. ಪ್ರಪ್ರಥಮ ಬಾರಿಗೆ 87ರ ಪ್ರಾಯದ ಬಿಸ್ಮಿಲ್ಲಾ ಖಾನ್‌ ಅವರು ಅಮ್ಜದ್‌ ಆಲಿಖಾನ್‌ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದೇ ಕಾರ್ಯಕ್ರಮದ ವಿಶೇಷ ಎಂದು ತಬಲಾ ವಾದಕ ಪಂಡಿತ್‌ ಚತುರ್‌ಲಾಲ್‌ ಅವರ ಮಗ ಚಿರಂಜೀತ್‌ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+