ಪುನರೂರು ಪ್ರತಾಪ: ಉ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ವಜಾ
ಪುನರೂರು ಪ್ರತಾಪ: ಉ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ವಜಾ
ಲೆಕ್ಕ ಪತ್ರ ಒದಗಿಸದೇ ಇರುವ ತಪ್ಪಿಗೆ ಸಂದ ಶಿಕ್ಷೆ
ಕಳೆದ ಎಂಟು ವರ್ಷಗಳಿಂದ ಟಿ. ಕೆ. ಮಹಮೂದ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಲೆಕ್ಕ ಪತ್ರವನ್ನು ಒಪ್ಪಿಸಿಲ್ಲ. ಕಾರ್ಯಕಾರಿ ಸಮಿತಿ ಸಭೆಗೆ ನಿರಂತರವಾಗಿ ಗೈರು ಹಾಜರಾಗುವುದರ ಜೊತೆಗೆ ಪತ್ರಕ್ಕೆ ಉತ್ತರಿಸುವ ಸೌಜನ್ಯವನ್ನು ಸಹ ತೋರಿಲ್ಲ ಎಂದು ಮಹಮೂದ್ ಅವರನ್ನು ವಜಾ ಮಾಡಿರುವುದಕ್ಕೆ ಪುನರೂರು ಸಮರ್ಥನೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಮಹಮೂದ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಈ ಕ್ರಮ ಲೆಕ್ಕಪತ್ರ ನೀಡದ ಇತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಿಗೆ ಎಚ್ಚರಿಕೆ ಗಂಟೆಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications