ಕುದುರೆಮುಖ ಉಳಿಸಿಕೊಳ್ಳಲು ಶಸ್ತ್ರಾಸ್ತ್ರ ಸಮೇತ ಹೋರಾಟ ?
ಕುದುರೆಮುಖ ಉಳಿಸಿಕೊಳ್ಳಲು ಶಸ್ತ್ರಾಸ್ತ್ರ ಸಮೇತ ಹೋರಾಟ ?
ಆದಿವಾಸಿ ರೈತ ಹೋರಾಟ ಸಂಘದವರಿಂದ ಸರಕಾರಕ್ಕೆ ಬೆದರಿಕೆ
ಪೀಪಲ್ಸ್ ವಾರ್ ಗ್ರೂಪ್ ಬೆಂಬಲಿತ ಆದಿವಾಸಿ ರೈತ ಹೋರಾಟ ಸಂಘದವರು ಈ ಕರಪತ್ರಗಳನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಹಂಚಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆಗಸ್ಟ್ 10ರ ಭಾನುವಾರ, ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸಿದ ಕೆಲ ಅಪರಿಚಿತ ವ್ಯಕ್ತಿಗಳು ಅಲ್ಲಿರುವ ಆದಿವಾಸಿಗಳಿಗೆ ಕರಪತ್ರವನ್ನು ಹಂಚಿದ್ದಲ್ಲದೆ, ಕರಪತ್ರದ ವಾಚನವನ್ನೂ ಮಾಡಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಗಣಿಗಾರಿಕೆ, ಅಣೆಕಟ್ಟು ನಿರ್ಮಾಣದಂತಹ ಜನವಿರೋಧೀ ಯೋಜನೆಗಳನ್ನು ಸರಕಾರ ಕೈಗೆತ್ತಿಕೊಂಡಲ್ಲಿ ಶಸ್ತ್ರಾಸ್ತ್ರ ಸಮೇತ ಹೋರಾಟ ಆರಂಭಿಸುವುದಾಗಿ ಆದಿವಾಸಿ ರೈತ ಸಂಘ ಕರಪತ್ರದಲ್ಲಿ ಘೋಷಿಸಿದೆ. ಕಳೆದ ಒಂದು ವರ್ಷದಿಂದ ಆದಿವಾಸಿ ರೈತ ಸಂಘವು ಆದಿವಾಸಿಗಳಿಗಾಗಿ ಹೋರಾಡುತ್ತಿರುವುದಾಗಿ ಕರಪತ್ರದಲ್ಲಿ ಹೇಳಿಕೊಂಡಿದೆ. ಈ ನಡುವೆ ಪೊಲೀಸ್ ತಂಡವೊಂದು ರಾಷ್ಟ್ರೀಯ ಉದ್ಯಾನವನದಲ್ಲಿ ಆದಿವಾಸಿ ಹೋರಾಟಗಾರರಿಗಾಗಿ ಹುಡುಕಾಟ ಆರಂಭಿಸಿದೆ.
ಪೊಲೀಸರಿಂದ ಕಿರುಕುಳ : ತನಿಖೆ ನಡೆಸುವ ನೆಪದಲ್ಲಿ ಆದಿವಾಸಿಗಳ ಮನೆಗೆ ನುಗ್ಗುತ್ತಿರುವ ಪೊಲೀಸರು ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿರುವುದಲ್ಲದೆ, ಮುಗ್ಧ ಆದಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕುದುರೆಮುಖ ಗಣಿಗಾರಿಕೆ ವಿರೋಧಿ ಒಕ್ಕೂಟ ಆಪಾದಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications