ಸ್ವಾತಂತ್ರ್ಯೋತ್ಸವದ ಆಸುಪಾಸು ಮಲೆನಾಡಲ್ಲಿ ಹರಿಹರೇಶ್ವರ
ಸ್ವಾತಂತ್ರ್ಯೋತ್ಸವದ ಆಸುಪಾಸು ಮಲೆನಾಡಲ್ಲಿ ಹರಿಹರೇಶ್ವರ
ಶಿವಮೊಗ್ಗದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹರಿ ಪ್ರತಿಭೆ
ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಆಸುಪಾಸು ಮಲೆನಾಡಿನ ಕೇಂದ್ರ ಶಿವಮೊಗ್ಗದಲ್ಲಿ ನಡೆಯುವ ಕೆಲವು ಕನ್ನಡ ಕಾರ್ಯಕ್ರಮಗಳಲ್ಲಿ ಹರಿಹರೇಶ್ವರ ಅವರು ಭಾಗವಹಿಸುವರು. ಅಂಥ ಎರಡು ಕಾರ್ಯಕ್ರಮಗಳ ವಿವರಗಳು ಇಲ್ಲಿವೆ :
*
ಶಿವಮೊಗ್ಗ ಕರ್ನಾಟಕ ಸಂಘವು ಸಾಹಿತಿ ಶಿಕಾರಿಪುರ ಹರಿಹರೇಶ್ವರ ಅವರೊಂದಿಗೆ ‘ಸಾಹಿತಿಗಳ ಸಂವಾದ’ ಕಾರ್ಯಕ್ರಮವನ್ನು ಆಗಸ್ಟ್ 14ರಂದು ಹಮ್ಮಿಕೊಂಡಿದೆ. ‘ಅಮೆರಿಕನ್ನಡ ಪತ್ರಿಕೆ’ ಯ ಸಂಪಾದಕರಾಗಿ, ಹ್ಯೂಸ್ಟನ್ ವಿಶ್ವಕನ್ನಡ ಸಮ್ಮೇಳನ ಸ್ಮರಣಸಂಚಿಕೆಗಳ ಸಂಪಾದಕರಾಗಿ, ಅಮೆರಿಕಾದ ಹಲವಾರು ಕನ್ನಡ ಸಂಘಗಳ ಸಾಹಿತ್ಯ ವಾರ್ಷಿಕ ಸಂಚಿಕಗಳ ಸಂಪಾದಕರೂ ಹಾಗೂ ಸಂಪಾದಕ ಮಂಡಳಿಯ ಸದಸ್ಯರಾಗಿ, ‘ಮಾತಿನ ಮಂಟಪ’ (ಪ್ರಬಂಧ ಸಂಕಲನ), ‘ವಿದೇಶಕ್ಕೆ ಬಂದವರು’ (ಕವನ ಸಂಕಲನ) ಕೃತಿಗಳ ಮೂಲಕ ಬರಹಗಾರರಾಗಿ, http://www.thatskannada.com ಅಂಕಣಕಾರರಾಗಿ - ಕನ್ನಡ ಸಾರಸ್ವತ ಲೋಕದಲ್ಲಿ ಗುರ್ತಿಸಿಕೊಂಡಿರುವ ಹರಿ ಪ್ರತಿಭೆ ಸಂವಾದದ ಮೂಲಕ ಶಿವಮೊಗ್ಗ ಜನತೆಯೆದುರು ಅನಾವರಣಗೊಳ್ಳಲಿದೆ.
ಕಾರ್ಯಕ್ರಮ ನಡೆಯುವ ಸ್ಥಳ : ಶಿವಮೊಗ್ಗ ಕರ್ನಾಟಕ ಸಂಘದ ಸಭಾಂಗಣ, ಬಿ. ಎಚ್. ರಸ್ತೆ, ಶಿವಮೊಗ್ಗ. ಸಂಜೆ: 4:00 ರಿಂದ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಜಯದೇವಪ್ಪ ಜೈನಕೇರಿ, ಗೌರವ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ- ದೂರವಾಣಿ: (08182) 271965.
ಶಿವಮೊಗ್ಗ ಕರ್ನಾಟಕ ಸಂಘದ ವಿಳಾಸ : ಶಿವಮೊಗ್ಗ ಕರ್ನಾಟಕ ಸಂಘ, ಬಿ. ಎಚ್ ರಸ್ತೆ, ಶಿವಮೊಗ್ಗ 577 201
*
ಆಗಸ್ಟ್ 15ರ ಶುಕ್ರವಾರ ಶಿವಮೊಗ್ಗದ ಗುರುಗುಹ ಸಂಗೀತ ಮಹಾ ವಿದ್ಯಾಲಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೈಸೂರು ನಿವಾಸಿ ಶಿಕಾರಿಪುರ ಹರಿಹರೇಶ್ವರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀರಾಮಮಂದಿರ, ಜಯನಗರ, ಶಿವಮೊಗ್ಗ. ಸಂಜೆ 6.30ಕ್ಕೆ ಕಾರ್ಯಕ್ರಮ ಶುರು.
ಕಾರ್ಯಕ್ರಮದಲ್ಲಿ -
ವಿದುಷಿ ಡಾ। ಸಿ. ನಂದಿನಿ ಅವರ ಹಾಡುಗಾರಿಕೆ,
ವಿದ್ವಾನ್ ಎಚ್ ಎಸ್ ಕೇಶವಪ್ರಸಾದ್ ವಯೋಲಿನ್ ಹಾಗೂ,
ವಿದ್ವಾನ್ ಹೊಸಹಳ್ಳಿ ಎನ್ ವೆಂಕಟರಮಣ ಮೃದಂಗ.
ವಿದ್ವಾನ್ ಜಿತೇಂದ್ರ ಕಿಶೋರ್ (ಬೆಂಗಳೂರು) ಮತ್ತು ವಿದ್ವಾನ್ ಏ. ವಿ. ಸತ್ಯನಾರಾಯಣ (ಬೆಂಗಳೂರು) ಅವರ ದ್ವಂದ್ವ ವಯಾಲಿನ್ ವಾದನ; ವಿದ್ವಾನ್ ರವಿಶಂಕರ ಶರ್ಮ (ಬೆಂಗಳೂರು) ಅವರ ಮೃದಂಗ, ವಿದ್ವಾನ್ ಸಂಪುಗೋಡು ಎಸ್ ಶೇಷಾದ್ರಿ ಭಟ್ (ಶೃಂಗೇರಿ) ಅವರ ಘಟ ವಾದ್ಯ ಸಹಯೋಗದೊಂದಿಗೆ ಸಂಗೀತ ಕಾರ್ಯಕ್ರಮದ ಶೋಭೆ ಹೆಚ್ಚಲಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಶೃಂಗೇರಿ ಎಚ್. ಎಸ್. ನಾಗರಾಜ್ (08182) 271 544
ಗುರುಗುಹ ಸಂಗೀತ ಮಹಾ ವಿದ್ಯಾಲಯದ ವಿಳಾಸ : ಗುರುಗುಹ ಸಂಗೀತ ಮಹಾ ವಿದ್ಯಾಲಯ, ಗುರುಗುಹ ಗಾನ ಸಭಾ, 53/1, 3ನೇ ತಿರುವು, ಬಸವನಗುಡಿ, ಶಿವಮೊಗ್ಗ 577 201
(ಇನ್ಫೋ ವಾರ್ತೆ)












Click it and Unblock the Notifications