ಆ.14ರಿಂದ ಬೆಂಗಳೂರಲ್ಲಿ 36 ಕ್ರಿಕೆಟಿಗರ ಯೋಗಾಯ ತಸ್ಮೈ ನಮಃ
ಆ.14ರಿಂದ ಬೆಂಗಳೂರಲ್ಲಿ 36 ಕ್ರಿಕೆಟಿಗರ ಯೋಗಾಯ ತಸ್ಮೈ ನಮಃ
ಮೊದಲು ಆಟಗಾರರ ಮನಸ್ಸು- ದೇಹದ ಕಸುವು ಹೆಚ್ಚಿಸುವುದು ರೈಟ್ ಉದ್ದೇಶ
ಭಾರತ ಕ್ರಿಕೆಟ್ ತಂಡದ ಕೋಚ್ ಜಾನ್ ರೈಟ್ ರ್ಯಾಂಕಿಂಗ್‌ನಲ್ಲಿ ಕೆಳಗಿರುವ ನ್ಯೂಜೆಲೆಂಡ್ ತಂಡವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಕಿವಿಮಾತು ಆಡಿದ್ದಾರೆ. ತಂಡವನ್ನು ಮೊದಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿಸಿ, ಆಮೇಲೆ ನೆಟ್ ಅಭ್ಯಾಸ ಮಾಡಿಸುವುದು ಜಾನ್‌ರೈಟ್ ಉದ್ದೇಶ. ಹೊಸದಾಗಿ ನೇಮಕಗೊಂಡಿರುವ ದೈಹಿಕ ತಜ್ಞ ಗ್ರೆಗರಿ ಅಲೆನ್ ಕಿಂಗ್ ಮತ್ತು ಫಿಸಿಯೋ ಆ್ಯಂಡ್ರೂ ಲೀಪಸ್ ಮಾರ್ಗದರ್ಶನದಲ್ಲಿ ಗುರುವಾರದಿಂದ ತಂಡದ ಕಸರತ್ತು ಶುರುವಾಗಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬುಧವಾರ (ಆ. 13) ಸುದ್ದಿಗಾರರಿಗೆ ಹೇಳಿದರು.
ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟಿಗರ ಕಸರತ್ತು ಆಗಸ್ಟ್ 26ನೇ ತಾರೀಕಿನವರೆಗೆ ನಡೆಯಲಿದೆ. ಈ ಅವಧಿಯಲ್ಲಿ ನಿತ್ಯ ಬೆಳಗ್ಗೆ 7.30 ಗಂಟೆಯಿಂದ ಒಂದು ತಾಸು ಯೋಗಾಭ್ಯಾಸ. ಆಮೇಲೆ ದಿನವಿಡೀ ವಿವಿಧ ವ್ಯಾಯಾಮಗಳು. ಆಟಗಾರರು ಈ ಶಿಬಿರದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಗಟ್ಟಿಯಾದ ನಂತರ ಸೆಪ್ಟೆಂಬರ್ 1ರಿಂದ ನೆಟ್ ಅಭ್ಯಾಸ. ಇದು ನಿಗದಿಯಾಗಿರುವ ಕಾರ್ಯಕ್ರಮ.
ಇಂಗ್ಲೆಂಡಿನಲ್ಲಿ ವಿವಿಧ ಕೌಂಟಿಗಳಿಗೆ ಆಡುತ್ತಿರುವ ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಈ ಶಿಬಿರದಲ್ಲಿ ಭಾಗವಹಿಸುತ್ತಿಲ್ಲ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications