ಮಂಗಳೂರು: ಕಲ್ಲಡ್ಕದಲ್ಲಿ ವ್ಯಕ್ತಿಗೆ ಇರಿತ,ನಿಷೇಧಾಜ್ಞೆ ,ಬಿಗಿ ಭದ್ರತೆ
ಮಂಗಳೂರು: ಕಲ್ಲಡ್ಕದಲ್ಲಿ ವ್ಯಕ್ತಿಗೆ ಇರಿತ,ನಿಷೇಧಾಜ್ಞೆ ,ಬಿಗಿ ಭದ್ರತೆ
ಜುಲೈ 19ರಿಂದ ಕುದಿಮೌನದ ಕಾವಿನಲ್ಲಿ ಕಲ್ಲಡ್ಕ ಪಟ್ಟಣ
ಮಂಗಳೂರಿಗೆ 30 ಕಿಲೋಮೀಟರ್ ಸಮೀಪದ ಕಲ್ಲಡ್ಕದಲ್ಲಿ ವ್ಯಕ್ತಿಯಾಬ್ಬ ಸೋಮವಾರ (ಆ.11) ರಾತ್ರಿ ಇರಿತಕ್ಕೊಳಗಾಗಿದ್ದಾನೆ. ಇರಿತಕ್ಕೆ ಕಾರಣ ಗೊತ್ತಾಗಿಲ್ಲ . ಇರಿದ ದುಷ್ಕರ್ಮಿಗಳ ಗುರುತೂ ಪತ್ತೆಯಾಗಿಲ್ಲ . ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಸೀಮಂತ ಕುಮಾರ್‌ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಕಲ್ಲಡ್ಕದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ನಿರ್ವಹಣೆಗಾಗಿ ಹೆಚ್ಚುವರಿ ಪಡೆಗಳು, ರಾಜ್ಯ ಮೀಸಲು ಪೊಲೀಸ್ ಹಾಗೂ ಜಿಲ್ಲಾ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಜುಲೈ 19ರಂದು- ಮಾರಣಾಂತಿಕ ಶಸ್ತ್ರಗಳನ್ನು ಹೊಂದಿದ್ದ 6 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದು , ಅಂದಿನಿಂದಲೂ ಕಲ್ಲಡ್ಕ ಉದ್ವಿಗ್ನವಾಗಿದೆ. ಸೋಮವಾರ ವ್ಯಕ್ತಿಯಾಬ್ಬ ಇರಿತಕ್ಕೊಳಗಾಗುವ ಮೂಲಕ ಕಲ್ಲಡ್ಕದಲ್ಲಿನ ಕುದಿಮೌನಕ್ಕೆ ಮತ್ತಷ್ಟು ಕಾವೇರಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications