ಮಾತು ತಪ್ಪಿದ ವಾಜಪೇಯಿಗೆ ಅಂಧ ಬಾಲಕಿಯಿಂದ ರಕ್ಷಾ ಬಂಧನ
ಮಾತು ತಪ್ಪಿದ ವಾಜಪೇಯಿಗೆ ಅಂಧ ಬಾಲಕಿಯಿಂದ ರಕ್ಷಾ ಬಂಧನ
ದೆಹಲಿಯ ಶಾಲಾ ಮಕ್ಕಳಿಂದ ಪ್ರಧಾನಿ ವಾಜಪೇಯಿಗೆ ರಾಖಿ, ಶುಭ ಹಾರೈಕೆ
ಕೈಗೆ ರಕ್ಷಾಬಂಧನ ಕಟ್ಟಿದ ಬಾಲಕಿ ಹೀಗೆ ಕೇಳಿದಾಗ ಪ್ರಧಾನಿ ವಾಜಪೇಯಿ ಕ್ಷಣಕಾಲ ಕಕ್ಕಾಬಿಕ್ಕಿ. ತಾನು ಮಾಡಿದ ತಪ್ಪಿನ ಬಗ್ಗೆ ವಾಜಪೇಯಿ ಅವರಿಗೆ ನೆನಪೇ ಇರಲಿಲ್ಲ . ಆರೋಪ ಹೊರಿಸಿದ ಬಾಲಕಿಯೇ ಮರೆತದ್ದನ್ನು ನೆನಪಿಸಿದಳು.
ಕಳೆದ ವರ್ಷ ರಕ್ಷಾಬಂಧನದ ಸಂದರ್ಭದಲ್ಲಿ ಇದೇ ಬಾಲಕಿ ಪ್ರಧಾನಿ ವಾಜಪೇಯಿ ಅವರಿಗೆ ರಾಖಿ ಕಟ್ಟಿದ್ದಳು. ರಾಖಿ ಕಟ್ಟುವ ಸಂದರ್ಭದಲ್ಲಿ ತಮ್ಮ ಕವನಗಳ ಕೆಸೆಟ್ಟೊಂದನ್ನು ಕಳುಹಿಸಿಕೊಡುವುದಾಗಿ ವಾಜಪೇಯಿ ಆ ಹುಡುಗಿಗೆ ವಚನ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಅಪಾರ ಕಾರ್ಯಭಾರಗಳ ನಡುವೆ ವಾಜಪೇಯಿ ಮರೆತಿದ್ದರು. ಆದರೆ, ಹುಡುಗಿ ಮಾತ್ರ ಅದನ್ನು ಮರೆತಿರಲಿಲ್ಲ .
ತಮ್ಮ ಮರೆವಿನ ಕುರಿತು ಪ್ರಧಾನಿಗೆ ಮುಜುಗರ. ತಪ್ಪನ್ನು ತಿದ್ದಿಕೊಳ್ಳುವುದಾಗಿ, ಕೆಸೆಟ್ ಮರೆಯದೇ ಕಳಿಸುವುದಾಗಿ ಹೇಳಿದಾಗ ಆ ಹುಡುಗಿಯ ಕೆನ್ನೆಗಳಲ್ಲಿ ಹೊಳಪು. ಜಾಣೆ ಹುಡುಗಿಯ ಆಸೆಯಂತೆ ವಾಜಪೇಯಿ ತಮ್ಮ ಕವಿತೆಯ ಕೆಲವು ಸಾಲುಗಳನ್ನು ವಾಚಿಸಿದರು. ಮಕ್ಕಳಿಂದ ಚಪ್ಪಾಳೆ.
ಅಂದಹಾಗೆ, ಪ್ರಧಾನಿಗೆ ನೆನಪಿನ ಪಾಠ ಹೇಳಿಕೊಟ್ಟ ಆ ಹುಡುಗಿ ಅಂಧಳು. ಈಕೆ ಓಂ ಪ್ರಕಾಶ್ ಪ್ರತಿಷ್ಠಾನ ಹಾಸ್ಟೆಲ್ ಹಾಗೂ ತರಬೇತಿ ಕೇಂದ್ರಕ್ಕೆ ಸೇರಿದ (Om Prakash Foundation hostel and Vocational Training Centre) ಹುಡುಗಿ.
ದೆಹಲಿಯ ವಿವಿಧ ಶಾಲೆಗಳ ಮಕ್ಕಳು ಪ್ರಧಾನಿ ಅವರ ನಿವಾಸಕ್ಕೆ ತೆರಳಿ (ಆ.12ರ ಮಂಗಳವಾರ) ವಾಜಪೇಯಿ ಅವರಿಗೆ ರಕ್ಷಾಬಂಧನ ಕಟ್ಟಿ ಶುಭ ಹಾರೈಸಿದರು. ಅವರಲ್ಲಿ ಕೆಲವು ಮಂದಿ ಅಂಗವಿಕಲ ಮಕ್ಕಳೂ ಇದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications