ಕೂಡಿಬಂದ ಮುಹೂರ್ತ, ಆ.18ರಿಂದ ಮೋಡ ಬಿತ್ತನೆ ಆರಂಭ
ಕೂಡಿಬಂದ ಮುಹೂರ್ತ, ಆ.18ರಿಂದ ಮೋಡ ಬಿತ್ತನೆ ಆರಂಭ
ಮೋಡಗಳನ್ನು ಬಿತ್ತಿ , ಮಳೆ ಬೆಳೆಯಬಲ್ಲೆವಾ ?
90 ದಿನಗಳ ಅವಧಿಯ ಈ ಮೋಡ ಬಿತ್ತನೆ ಯೋಜನೆಯಿಂದಾಗಿ ರಾಜ್ಯದಲ್ಲಿ ಕೃತಕ ಮಳೆ ತರಿಸಲಾಗುವುದು. ರಾಜ್ಯದಲ್ಲಿ ಮಳೆಯಾಗದೇ ಇರುವ ಎಲ್ಲ ಜಲಾಶಯ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
5. 65 ಕೋಟಿ ರೂಪಾಯಿ ವೆಚ್ಚದ ಈ ಮೋಡ ಬಿತ್ತನೆ ಯೋಜನೆಯನ್ನು ಅಮೆರಿಕಾ ಮೂಲದ ಹವಾಮಾನ ಅಭಿವೃದ್ಧಿ ಸಂಸ್ಥೆಯಾಂದಕ್ಕೆ ರಾಜ್ಯ ಸರಕಾರ ಗುತ್ತಿಗೆ ನೀಡಿದೆ. ಈ ಯೋಜನೆಗೆ ಬೇಕಾದ ವೈಮಾನಿಕ ವಾಹನಗಳು ಆ. 11ರ ಸಂಜೆ ರಾಜ್ಯಕ್ಕೆ ಆಗಮಿಸಲಿವೆ ಎಂದು ಪಾಟೀಲ್ ತಿಳಿಸಿದರು.
ರಕ್ಷಣಾ ಸಚಿವಾಲಯ, ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಗೃಹ ಸಚಿವಾಲಯ ಈ ಮೋಡ ಬಿತ್ತನೆ ಯೋಜನೆಗೆ ಒಪ್ಪಿಗೆ ನೀಡಿದೆ. ಹವಾಮಾನ ಅಭಿವೃದ್ಧಿ ಸಂಸ್ಥೆಯು ರಾಡಾರ್ ಮೂಲಕ ಮೋಡ ಬಿತ್ತನೆ ಮಾಡಬೇಕಾದ ಜಾಗವನ್ನು ಗುರುತಿಸಲಿದೆ. 20 ನಿಮಿಷಗಳ ಅವಧಿಯಲ್ಲಿ ಈ ಮೋಡ ಬಿತ್ತನೆಯ ಜಾಗಗಳನ್ನು ಗುರುತಿಸಲಾಗುವುದು ಎಂದ ಪಾಟೀಲ್- ರಾಜ್ಯದಲ್ಲಿ 1139 ಮಿಮೀ ಮಳೆಯಾಗಬೇಕಿತ್ತು. ಆದರೆ 2002ನೇ ಇಸವಿಯಲ್ಲಿ ಶೇ.29ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿರುವುದಾಗಿ ಹೇಳಿದರು.
ಯೋಜನೆಯನ್ನು ಕೈಗೆತ್ತಿಕೊಂಡಿರುವ ಹವಾಮಾನ ಅಭಿವೃದ್ಧಿ ಸಂಸ್ಥೆಯು ಮೋಡ ಬಿತ್ತನೆಯಿಂದಾಗಿ ಕನಿಷ್ಠ ಶೇ.15ರಿಂದ ಶೇ 20ರಷ್ಟಾದರೂ ಮಳೆಯಾಗಲಿದೆ ಎಂದು ಭರವಸೆ ನೀಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಸರಕಾರವು ಮೋಡ ಬಿತ್ತನೆ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಇದೇ ಪ್ರಥಮ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications