ಕರ್ತವ್ಯಲೋಪ : ತುಂಗಾ ಮೇಲ್ದಂಡೆ ಅಧಿಕಾರಿಗಳ ಅಮಾನತು
ಕರ್ತವ್ಯಲೋಪ : ತುಂಗಾ ಮೇಲ್ದಂಡೆ ಅಧಿಕಾರಿಗಳ ಅಮಾನತು
ಅಕ್ರಮ ಬ್ಯಾಂಕ್ ಗ್ಯಾರಂಟಿ ನೀಡಿ ಸಿಕ್ಕಿಬಿದ್ದ ಇಂಜಿನಿಯರ್‌ಗಳು
ಕಾಮಗಾರಿಗಳು ಪೂರ್ಣವಾಗುವ ಮುನ್ನವೇ ಕೆಲವು ಗುತ್ತಿಗೆದಾರರಿಗೆ ಬ್ಯಾಂಕ್ ಖಾತರಿಗಳನ್ನು ಕಾನೂನಿಗೆ ವಿರುದ್ಧವಾಗಿ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರ್‌ಗಳಾದ ಟಿ.ವಿ.ರಾಮಚಂದ್ರಪ್ಪ ಹಾಗೂ ಎಚ್.ಪಿ.ಜಯಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಅಮಾನತುಗೊಂಡ ಇಂಜಿನಿಯರ್‌ಗಳು ರಟ್ಟೀಹಳ್ಳಿ ವಲಯದಲ್ಲಿನ 13 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ 961.58 ಲಕ್ಷ ರುಪಾಯಿಗಳ ಬ್ಯಾಂಕ್ ಖಾತರಿಯನ್ನು ಬಿಡುಗಡೆ ಮಾಡಿದ್ದಾರೆ. ಇದು ಕರ್ನಾಟಕ ಸಾರ್ವಜನಿಕ ಕೆಲಸಗಳ ಇಲಾಖೆಯ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅಮಾನತುಗೊಂಡ ನೌಕರರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು ಎಂದು ಪಾಟೀಲ್ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ರಾಜ್ಯ ನೀರಾವರಿ ನಿಗಮದ ಅಧ್ಯಕ್ಷರಿಗೆ ಆದೇಶಿಸಲಾಗಿದೆ. ನಿಮಗದ ಅಧ್ಯಕ್ಷರು ಎಲ್ಲಾ ಬ್ಯಾಂಕ್ ಗ್ಯಾರಂಟಿಗಳನ್ನು ತಪಾಸಣೆಗೆ ಗುರಿಪಡಿಸುವರು ಎಂದು ಸಚಿವ ಪಾಟೀಲ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications