ಸದ್ಯವೇ ರಾಜೂಗೌಡ ವಿರುದ್ಧ ರಾಜಕೀಯಕ್ಕೆ ಪರಿಮಳಾ ನಾಗಪ್ಪ

ಸದ್ಯವೇ ರಾಜೂಗೌಡ ವಿರುದ್ಧ ರಾಜಕೀಯಕ್ಕೆ ಪರಿಮಳಾ ನಾಗಪ್ಪ
ಪೊನ್ನಾಚಿ ಮಹಾದೇವ ಸ್ವಾಮಿ ಘೋಷಣೆ

ಹನೂರು: ನರಹಂತಕ ವೀರಪ್ಪನ್‌ ಸೆರೆಯಲ್ಲಿ ಹತರಾದ ಜನತಾ ದಳ ಮುಖಂಡ ಎಚ್‌. ನಾಗಪ್ಪನವರ ಪತ್ನಿ ಪರಿಮಳಾ ನಾಗಪ್ಪ ಸದ್ಯದಲ್ಲೇ ಸೂಕ್ತ ವೇದಿಕೆಯ ಮೂಲಕ ರಾಜಕೀಯ ಪ್ರವೇಶಿಸಲಿದ್ದಾರೆ.

ಜನತಾ ದಳದ ಮುಖಂಡ ಪೊನ್ನಾಚಿ ಮಹದೇವ ಸ್ವಾಮಿ ಪರಿಮಳಾ ನಾಗಪ್ಪನವರ ರಾಜಕೀಯ ಪ್ರವೇಶ ಕುರಿತಾದ ವಿಷಯವನ್ನು ಭಾನುವಾರ ಘೋಷಿಸಿದ್ದಾರೆ. ಕಾಮಗೆರೆ ಗ್ರಾಮದಲ್ಲಿರುವ ದಿವಂಗತ ಎಚ್‌. ನಾಗಪ್ಪ ನಿವಾಸದಲ್ಲಿ ನಡೆದ ಜನತಾ ದಳದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಹಾಲಿ ಸಚಿವರಾಗಿರುವ ಹಾಗೂ ವೀರಪ್ಪನ್‌ ಜೊತೆ ಸಂಬಂಧವಿರಿಸಿಕೊಂಡಿದ್ದಾರೆ ಎಂಬ ಆಪಾದನೆಯನ್ನೂ ಹೊತ್ತಿರುವ ರಾಜೂ ಗೌಡ ಅವರಿಗೆ ಪರ್ಯಾಯವಾಗಿ ಪರಿಮಳಾ ನಾಗಪ್ಪ ಅವರನ್ನು ಒಂದು ಶಕ್ತಿಯನ್ನಾಗಿ ರೂಪಿಸಲು ಜನತಾ ದಳದ ಸಭೆ ತೀರ್ಮಾನಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕಾಗಿ ಶೀಘ್ರವೇ ವೇದಿಕೆ ಸಿದ್ಧ ವಾಗಲಿರುವುದಾಗಿ ಮಹದೇವಸ್ವಾಮಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+